ಖ್ಯಾತ ನಟಿ ಕಿಯಾರಾ ಅಡ್ವಾಣಿ ಅಮ್ಮನಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗಷ್ಟೇ ನಟಿ ತಾವು ತಾಯಿಯಾಗುತ್ತಿರುವ ಸುದ್ದಿಯನ್ನು ತಿಳಿಸಿದ್ದಾರೆ. ಸದ್ಯ ಯಶ್ ನಟನೆಯ ಟಾಕ್ಸಿಕ್ ಸಿನಿಮಾದಲ್ಲಿ ತೊಡಗಿಕೊಂಡಿದ್ದು ಈ ಮಧ್ಯೆ ಮಹತ್ವದ ಸಿನಿಮಾವೊಂದರ ಅವಕಾಶ ನಟಿಯ ಕೈ ತಪ್ಪಿದೆ ಎನ್ನಲಾಗುತ್ತಿದೆ.
ಕಿಯಾರಾ ಅಡ್ವಾಣಿಗೆ ಸಖತ್ ಡಿಮ್ಯಾಂಡ್ ಇದ್ದು ಹಲವು ಸಿನಿಮಾಗಳಲ್ಲಿ ನಟಿ ತೊಡಗಿಕೊಂಡಿದ್ದಾರೆ. ಸದ್ಯ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಜೊತೆಗೆ ಹೃತಿಕ್ ರೋಷನ್, ಜೂನಿಯರ್ ಎನ್ಟಿಆರ್ ನಟನೆಯ ‘ವಾರ್ 2’ ಸಿನಿಮಾ ಕೂಡ ಕಿಯಾರಾ ಅಡ್ವಾಣಿ ಕೈಯಲ್ಲಿದೆ. ಜೊತೆಗೆ ʼಡಾನ್ 3’ ಚಿತ್ರದಲ್ಲಿ ನಟಿಸುವ ಬಗ್ಗೆ ಮಾತುಕತೆ ನಡೆದಿತ್ತು. ಆದ್ರೆ ನಟಿ ತಾಯಿಯಾಗುತ್ತಿರುವ ಹಿನ್ನೆಲೆಯಲ್ಲಿ ʼಡಾನ್ 3’ ಸಿನಿಮಾದ ಅವಕಾಶ ಕೈ ತಪ್ಪಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಫರ್ಹಾನ್ ಅಖ್ತರ್ ‘ಡಾನ್ 3’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದು, ನಾಯಕನಾಗಿ ರಣವೀರ್ ಸಿಂಗ್ ಕಾಣಿಸಿಕೊಳ್ತಿದ್ದಾರೆ. ರಣವೀರ್ ಗೆ ಜೋಡಿಯಾಗಿ ಕಿಯಾರಾ ಅಡ್ವಾನಿ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಪ್ರೆಗ್ನೆಂಟ್ ಆದ ಬಳಿಕ ಶೂಟಿಂಗ್ನಲ್ಲಿ ಭಾಗಿಯಾಗುವುದು ಕಷ್ಟ ಎಂಬ ಕಾರಣಕ್ಕೆ ಕಿಯಾರಾ ಅಡ್ವಾಣಿ ಅವರು ‘ಡಾನ್ 3’ ಪಾತ್ರವರ್ಗದಿಂದ ಹೊರನಡೆದಿದ್ದಾರೆ ಎಂದು ಸುದ್ದಿಯಾಗಿದೆ. ಸದ್ಯ ಕಿನಾರಾ ಜಾಗಕ್ಕೆ ಮತ್ತೊಬ್ಬ ನಟಕಿಯ ಹುಡುಕಾಟದಲ್ಲಿ ಚಿತ್ರತಂಡ ತೊಡಗಿಕೊಂಡಿದೆ ಎನ್ನಲಾಗುತ್ತಿದೆ.