ಮ್ಯಾಕ್ಸ್ ಸಿನಿಮಾದ ನಿರ್ದೇಶಕ ವಿಜಯ್ ಕಾರ್ತಿಕೇಯ್ ಜೊತೆ ನಟ ಕಿಚ್ಚ ಸುದೀಪ್ ಮತ್ತೆ ಕೈ ಜೋಡಿಸಿರೋದು ಗೊತ್ತೇ ಇದೆ. ಮಾರ್ಕ್ ಸಿನಿಮಾದ ಮೂಲಕ ಈ ಜೋಡಿ ಮತ್ತೆ ಒಂದಾಗುತ್ತಿದ್ದಾರೆ. ಈ ಮಧ್ಯೆ ಸುದೀಪ್ ವಿಜಯ್ ಕಾರ್ತಿಕೇಯಗೆ ಬೆಲೆಬಾಳುವ ಐಷಾರಾಮಿ ಸ್ಕೋಡಾ ಕಾರು ಗಿಫ್ಟ್ ಆಗಿ ನೀಡಿದ್ದಾರೆ.
ಸುದೀಪ್ ತಮ್ಮ ನಿವಾಸಕ್ಕೆ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರನ್ನು ಕರೆದು ಸರ್ಪ್ರೈಸ್ ಉಡುಗೊರೆ ನೀಡಿದ್ದಾರೆ. ಸುದೀಪ್ ನೀಡಿದ ಉಡುಗೊರೆ ನೋಡಿ ವಿಜಯ್ ಕಾರ್ತಿಕೇಯ ಸಖತ್ ಖುಷಿಯಾಗಿದ್ದಾರೆ.
ಅಂದ ಹಾಗೆ ಕಳೆದ ಜುಲೈ ತಿಂಗಳಲ್ಲಿ ‘ಮಾರ್ಕ್’ ಸಿನಿಮಾ ಅನೌನ್ಸ್ ಆಯಿತು. ಕೇವಲ 7 ತಿಂಗಳಲ್ಲಿ ಸಿನಿಮಾ ಶೂಟ್ ಮಾಡಿ, ಜನರ ಎದುರು ತಂದಿಡುವ ಆಲೋಚನೆ ಸುದೀಪ್ ಹಾಗೂ ತಂಡಕ್ಕೆ ಇದೆ. ಈ ಕಾರಣದಿಂದಲೇ ವೇಗವಾಗಿ ಸಿನಿಮಾ ಶೂಟ್ ಮಾಡಲಾಗಿದೆ. ಇದಕ್ಕೆ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರ ವೇಗ ಕೂಡ ಕಾರಣ. ವಿಜಯ್ ಕಾರ್ತಿಕೇಯ ಅವರಿಗೆ ಕೆಲಸದ ಮೇಲಿರುವ ಪ್ರೀತಿಯನ್ನು ಮೆಚ್ಚಿಕೊಂಡ ಕಿಚ್ಚ ಸುದೀಪ್ ಸ್ಕೋಡಾ ಕಂಪನಿಯ Kylaqನ ‘ಕಾರ್ಬನ್ ಸ್ಟೀಲ್’ (ಕಪ್ಪು) ಬಣ್ಣದ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ಕಾರಿನ ಆನ್ ರೋಡ್ ಬೆಲೆ ಬೆಂಗಳೂರಿನಲ್ಲಿ ಬೆಸಿಕ್ ವರ್ಷನ್ಗೆ 9.10 ಲಕ್ಷ ರೂಪಾಯಿಯಿಂದ ಆರಂಭ ಆಗಿ, ಹೈ ಎಂಡ್ಗೆ 15.80 ಲಕ್ಷ ರೂಪಾಯಿವರೆಗೆ ಇದೆ. ಸುದೀಪ್ ನೀಡಿದ್ದು ಹೈ ಎಂಡ್ ವರ್ಷನ್ ಎನ್ನಲಾಗುತ್ತಿದೆ. ಇದರಲ್ಲಿ ಮ್ಯಾನ್ಯುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್ಮೀಷನ್ ಎರಡೂ ಕೂಡ ಲಭ್ಯವಿದೆ. ಪ್ರತಿ ಲೀಟರ್ ಪೆಟ್ರೋಲ್ಗೆ 17 ಕಿಲೋಮೀಟರ್ ಮೈಲೇಜ್ನ ಈ ಕಾರು ನೀಡಬಲ್ಲದ್ದಾಗಿದ್ದು ಆರು ಬಣ್ಣಗಳಲ್ಲಿ ಈ ಕಾರು ಲಭ್ಯವಿದೆ.