ಕಳೆದ ಕೆಲ ತಿಂಗಳ ಹಿಂದೆ ಜಮ್ಮು-ಕಾಶ್ಮೀರದ ಪೆಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯ ಕಹಿ ನೆನಪು ಯಾರು ಕೂಡ ಮರೆಯಲು ಸಾಧ್ಯವೆ ಇಲ್ಲ. ಹಲವರು ಈ ದಾಳಿಯಲ್ಲಿ ನಿಧನರಾಗಿದ್ದು ಒಬ್ಬೊಬ್ಬರದ್ದು ಒಂದೊಂದು ಕಥೆ. ಮೃತರದಲ್ಲಿ ಆಗ ತಾನೆ ಮದುವೆಯಾಗಿ ಹೋಗಿದ್ದ ಜೋಡಿಯೂ ಇತ್ತು. ಹನಿಮೂನ್ ಗೆಂದು ಬಂದಿದ್ದ ನವ ಜೋಡಿಗಳಲ್ಲಿ ಉಗ್ರರು ಪತಿಯನ್ನು ಹತ್ಯೆ ಮಾಡಿದ್ದು ಇದೀಗ ಇದೇ ವಿಚಾರವನ್ನು ಇಟ್ಟುಕೊಂಡು ನಟಿ ಚಂದನಾ ಅನಂತಕೃಷ್ಣ ಅವರು ಒಂದು ಸಾಂಗ್ ಒಂದನ್ನು ಮಾಡಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಸೇರಿದಂತೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.
‘ಇನ್ ಹಿಸ್ ನೇಮ್’ ಅನ್ನೋದು ಹಾಡಿನ ಹೆಸರಾಗಿದ್ದು ಈ ಹಾಡನ್ನು ಚಂದನಾ ಅವರೇ ಹಾಡಿದ್ದಾರೆ. ಈ ವಿಡಿಯೋ ಸಾಂಗ್ನಲ್ಲಿ ನವ ವಿವಾಹಿತೆಯಾಗಿ ಚಂದನ ಅನಂತಕೃಷ್ಣ ಕಾಣಿಸಿಕೊಳ್ಳುವುದರ ಜೊತೆಗೆ ನಿರ್ಮಾಣದ ಜವಬ್ದಾರಿಯನ್ನು ಹೊತ್ತಿದ್ದಾರೆ.
ಪೆಹಲ್ಗಾಮ್ ಉಗ್ರರರ ದಾಳಿಯ ಸಂತ್ರಸ್ತರಿಗೆ ಶ್ರದ್ಧಾಂಜಲಿ ಅರ್ಪಿಸುವ ರೀತಿಯಲ್ಲಿ ಈ ಹಾಡು ಮೂಡಿಬಂದಿದೆ. ಮಯೂರ್ ಅಂಬೆಕಲ್ಲು ಹಾಡನ್ನು ಸಂಯೋಜನೆ ಮಾಡಿದ್ದಾರೆ. ತೇಜಸ್ ಕಿರಣ್ ಹಾಗೂ ಮಯೂರ್ ಒಟ್ಟಾಗಿ ನಿರ್ದೇಶನ ಮಾಡಿದ್ದಾರೆ. ಚಂದನಾ ಜೊತೆ ನಿದರ್ಶನ್, ಸಂದೀಪ್ ರಾಜ್ಗೋಪಾಲ್ ನಟಿಸಿದ್ದಾರೆ.
ಈ ಹಾಡಿನ ಬಗ್ಗೆ ಮಾತನಾಡಿರೋ ಚಂದನಾ ಅವರು, ‘ನಾನು ಈಗ ಚಂದ್ರನ ಮೇಲಿದ್ದಂತೆ ಭಾಸ ಆಗುತ್ತಿದೆ. ಎಲ್ಲವೂ ಟೀಂ ವರ್ಕ್ ಇದೆ. ಇದನ್ನು ತುಂಬಾ ಜನರು ಇಷ್ಟಪಟ್ಟಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಶಿವಣ್ಣ ಇನ್ಸ್ಟಾಗ್ರಾಮ್ ಸ್ಟೇಟಸ್ ಹಾಕಿದ್ದರು. ಈಗ ಸುದೀಪ್ ಕೂಡ ಹಾಡಿನ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅವರು ತುಂಬಾನೇ ವಿವರವಾಗಿ ಹಾಡಿನ ಬಗ್ಗೆ ಮಾತನಾಡಿದ್ದಾರೆ. ಹಾಡು ಇನ್ನೂ ಹೆಚ್ಚಿನ ಜನರಿಗೆ ತಲುಪಬೇಕಿದೆ’ ಎಂದಿದ್ದಾರೆ.
‘ಕಾನ್ಸೆಪ್ಟ್ ಇಷ್ಟ ಆಯಿತು, ಅದಕ್ಕೆ ಹಾಡನ್ನು ನಿರ್ಮಾಣ ಮಾಡಿದೆ. ಈ ರೀತಿಯ ಪಾತ್ರ ಸಿಕ್ಕಿದ್ದು ನನ್ನ ಅದೃಷ್ಟ. ಒಳ್ಳೆಯ ಅವಕಾಶ ಸಿಕ್ಕಾಗ ಅದನ್ನು ಬೇಡ ಅನ್ನಬಾರದು. ಈ ಹಾಡಿನಿಂದ ದುಡ್ಡು ಬರುತ್ತದೆಯೋ ಇಲ್ಲವೋ ಅದು ಎರಡನೇ ವಿಚಾರ. ಆದರೆ, ಇಂಥ ಅವಕಾಶ ಸಿಕ್ಕಾಗ ನನಗೆ ಹಣ ಹಾಕಬೇಕು ಎಂದು ಅನಿಸಿತು. ಇದನ್ನು ನಿರ್ದೇಶಕರು ಹೇಳಿದಾಗ ಖುಷಿ ಆಯ್ತು’ ಎಂದು ಚಂದನಾ ಹಾಡಿನ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.