ಗೌರವ ಡಾಕ್ಟರೇಟ್ ಪದವಿ ತಿರಸ್ಕರಿಸಿದ ಕಿಚ್ಚ ಸುದೀಪ್.! ಯಾಕೆ ಗೊತ್ತಾ..?

0
Spread the love

ನಟ ಕಿಚ್ಚ ಸುದೀಪ್‌ಗೆ ತುಮಕೂರು ವಿಶ್ವವಿದ್ಯಾನಿಲಯ ಗೌರ ಡಾಕ್ಟರೇಟ್‌ ಘೋಷಿಸಿತ್ತು. ಆದರೆ ಇದನ್ನು ನಟ ಸುದೀಪ್‌ ನಿರಾಕರಿಸಿದ್ದಾರೆ. ಹೌದು ತುಮಕೂರು ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವದಲ್ಲಿ ನಟ ಕಿಚ್ಚ ಸುದೀಪ್​ಗೆ ಡಾಕ್ಟರೇಟ್ ನೀಡಲು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಈ ಗೌರವವನ್ನು ಸುದೀಪ್​ ಅವರು ನಯವಾಗಿ ತಿರಸ್ಕಾರ ಮಾಡಿದ್ದಾರೆ.

Advertisement

ವಿವಿಧ ಹಂತದಲ್ಲಿ ಅವರನ್ನು ಸಂಪರ್ಕಿಸಲು ಯತ್ನಿಸಲಾಗಿತ್ತು. ಅಂತಿಮವಾಗಿ ಅವರ ಆಪ್ತ ಸಹಾಯಕರ ಮೂಲಕ ಅವರನ್ನು ಪ್ರಸ್ತಾಪ ಮಾಡಲಾಯಿತು. ಡಾಕ್ಟರೇಟ್ ಪದವಿ ಪಡೆಯುವ ನಿರ್ಧಾರ ತಿಳಿಸಲು ಎರಡು ದಿನಗಳ ಕಾಲಾವಕಾಶ ಕೇಳಿದ್ದರು. ಆ ನಂತರ ಅವರು ತಮ್ಮ ಆಪ್ತ ಸಹಾಯಕನ ಮೂಲಕವೇ ನನಗಿಂತ ಅನೇಕ ಮಂದಿ ಹೆಚ್ಚು ಸಾಧನೆ ಮಾಡಿದವರು ಇದ್ದಾರೆ. ಅವರನ್ನು ಪರಿಗಣಿಸಿ, ಅಲ್ಲದೇ ತುಮಕೂರು ವಿಶ್ವವಿದ್ಯಾಲಯದ ನಿರ್ಧಾರಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here