ದೇವಾಲಯದಲ್ಲಿ ಅರ್ಚಕನ ಕೊಲೆ: ದೂರು ಕೊಟ್ರೂ ಕ್ಯಾರೇ ಎನ್ನದ ಅಧಿಕಾರಿಗಳು!

0
Spread the love

ನವದೆಹಲಿ:- ದೇವಾಲಯದಲ್ಲಿ ಅರ್ಚಕನ ಕೊಲೆ ನಡೆದಿದ್ದು, ಘಟನೆ ಸಂಬಂಧ ದೂರು ಕೊಟ್ರೂ ಪೊಲೀಸರು ಕ್ಯಾರೇ ಎಂದಿಲ್ಲ.

Advertisement

ಇಲ್ಲಿನ ಭದೋಹಿಯ ಸುರಿಯಾವದಲ್ಲಿರುವ ಪುರಾತನ ಹನುಮಾನ್ ದೇವಾಲಯದ ಆವರಣದಲ್ಲಿ ಘಟನೆ ಜರುಗಿದೆ. ಕತ್ತು ಸೀಳಿ ದೇವಸ್ಥಾನದ ಆವರಣದಲ್ಲೇ ಅವರನ್ನು ಕೊಲೆ ಮಾಡಲಾಗಿದೆ.

ದೇವಸ್ಥಾನದಲ್ಲಿ ಕಳ್ಳತನ ಹಾಗೂ ಹಲವು ಜನರು ಗುಂಪು ಸೇರುತ್ತಿರುವ ಬಗ್ಗೆ ಅರ್ಚಕ ಪೊಲೀಸರಿಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ದೇವಸ್ಥಾನದಲ್ಲಿದ್ದ ಹಲವು ಕಾಣಿಕೆ ಡಬ್ಬಗಳೂ ನಾಪತ್ತೆಯಾಗಿದ್ದವು.

ಅರ್ಚಕರ ದೂರಿನ ಮೇರೆಗೆ ಕ್ರಮ ಕೈಗೊಳ್ಳಲು ವಿಫಲರಾದ ಸೂರ್ಯಾವದ ಸ್ಟೇಷನ್ ಹೌಸ್ ಆಫೀಸರ್ ಸೇರಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಇದೀಗ ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ಪೊಲೀಸ್ ತನಿಖೆ ಆರಂಭಿಸಲಾಗಿದೆ. ದೇವಸ್ಥಾನದ ಬಳಿ ದರೋಡೆ ಮತ್ತು ಸಮಾಜ ವಿರೋಧಿ ಗುಂಪುಗಳ ಬಗ್ಗೆ ಪೊಲೀಸರಿಗೆ ಈ ಮೊದಲೇ ಮಾಹಿತಿ ನೀಡಲಾಗಿತ್ತು. ಆದರೆ, ಅವುಗಳನ್ನು ತಡೆಯಲು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಅರ್ಚಕನನ್ನೇ ಕೊಲೆ ಮಾಡಲಾಗಿದೆ.

ಪ್ರಕರಣವನ್ನು ನಿಭಾಯಿಸಲು 5 ತಂಡಗಳನ್ನು ರಚಿಸಲಾಗಿದೆ ಎಂದು ಭದೋಹಿಯ ಪೊಲೀಸ್ ವರಿಷ್ಠಾಧಿಕಾರಿ ಮೀನಾಕ್ಷಿ ಕಾತ್ಯಾಯನ್ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here