ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ರಣಜಿ ಟೂರ್ನಿ ಪಂದ್ಯದಲ್ಲಿ ದೆಹಲಿ ತಂಡ ಜಯ ಸಾಧಿಸಿದೆ.
Advertisement
ಇದೇ ವೇಳೆ ಕಿಂಗ್ ವಿರಾಟ್ ಕೊಹ್ಲಿ ಅಭಿಮಾನಿಗಳು ಮೈದಾನಕ್ಕೆ ನುಗ್ಗಿರುವ ಪ್ರಸಂಗವೂ ನಡೆದಿದೆ. ಪಂದ್ಯದ ಮೂರನೇ ದಿನದಾಟದಲ್ಲಿ ರೈಲ್ವೇಸ್ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭ ಮೂವರು ಅಭಿಮಾನಿಗಳು ಒಂದೇ ಸಮನೆ ಮೈದಾನಕ್ಕೆ ನುಗ್ಗಿದ್ದಾರೆ.
ಇತ್ತ ಒಂದೇ ಬಾರಿ ಮೂವರು ಅಭಿಮಾನಿಗಳು ಮೈದಾನಕ್ಕೆ ಜಿಗಿದಿದ್ದರಿಂದ ಸಿಬ್ಬಂದಿಗಳು ಯಾರನ್ನು ಹಿಡಿಯಬೇಕೆಂದು ಗೊಂದಲಕ್ಕೀಡಾದರು. ಅಷ್ಟರಲ್ಲಾಗಲೇ ಮೂವರು ಅಭಿಮಾನಿಗಳು ವಿರಾಟ್ ಕೊಹ್ಲಿ ಬಳಿಗೆ ತಲುಪಿ ಅವರ ಕಾಲಿಗೆ ನಮಿಸಿದ್ದಾರೆ.
ಇದರ ನಡುವೆ ಕೆಲ ಅಭಿಮಾನಿಗಳು ಮೈದಾನಕ್ಕೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿಗಳು ಏಟು ರುಚಿ ತೋರಿಸಿ, ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.