ಕಿಂಗ್ ಖಾನ್ ‘ಡಂಕಿ’ ಟೀಸರ್ ಗೆ ಮಿಲಿಯನ್ಸ್ ವೀವ್ಸ್…ಈ ವರ್ಷ ಅತಿ ಹೆಚ್ಚು ವೀವ್ಸ್ ಕಂಡ ಟೀಸರ್

0
Spread the love

ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಬ್ಯಾಕ್ ಟು ಬ್ಯಾಕ್ ಎರಡು ಗೆಲುವು ಕಂಡಿದ್ದಾರೆ. ಈ ವರ್ಷದಲ್ಲಿ ಪಠಾಣ್ ಮತ್ತು ಜವಾನ್‌ ಎರಡು ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ನೀಡಿದ್ದಾರೆ. ಮೇಲಾಗಿ ಆ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲೂ ಸಾವಿರಾರು ಕೋಟಿ ಕಮಾಯಿ ಮಾಡಿವೆ. ಈ ಎರಡು ಸಿನಿಮಾಗಳ ಬಳಿಕ ಮತ್ತೊಂದು ವಿಭಿನ್ನ ಅವತಾರದಲ್ಲಿ ಎದುರಾಗಿ ಮನರಂಜನೆ ನೀಡಲು ಶಾರುಖ್‌ ಖಾನ್‌ ಸಿದ್ಧರಾಗಿದ್ದಾರೆ. ರಾಜ್ ಕುಮಾರ್ ಹಿರಾನಿ ಸಾರಥ್ಯದ ಡಂಕಿ ಸಿನಿಮಾದ ಟೀಸರ್ ನಿನ್ನೆ ಕಿಂಗ್ ಖಾನ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿತ್ತು. ಮಾಸ್ ಅವತಾರದಲ್ಲಿ ಅಬ್ಬರಿಸ್ತಿದ್ದ ಶಾರುಖ್ ಡಂಕಿ ಮೂಲಕ ಕ್ಲಾಸ್ ಅವತಾರದಲ್ಲಿ ದರ್ಶನ‌ ಕೊಟ್ಟಿದ್ದು, ಟೀಸರ್ 4 ಕೋಟಿ‌ ಮಿಲಿಯನ್ ವೀವ್ಸ್ ಕಂಡಿದೆ. ಈ ವರ್ಷದಲ್ಲಿ ಅತಿ ಹೆಚ್ಚು ವೀವ್ಸ್ ಕಂಡ ಟೀಸರ್ ಇದಾಗಿದೆ.

Advertisement

ಮುಂಬೈನಲ್ಲಿ ನಡೆದ ಡಂಕಿ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿರುವ ಶಾರುಖ್ ಖಾನ್, ಪಠಾಣ್ ಹಾಗೂ ಜವಾನ್ ಸಿನಿಮಾಗಿಂತ ಡಂಕಿ ಸಿನಿಮಾ ಅತಿ ಹೆಚ್ಚು ಮನರಂಜನೆ ನೀಡಲಿದೆ. ರಾಜ್ ಕುಮಾರ್ ಹಿರಾನಿ ಅವರೊಂದಿಗೆ ಕೆಲಸ ಮಾಡುವುದು ಅದ್ಭುತ ಅನುಭವಾಗಿದೆ. ಹಿರಾನಿ ಚಿತ್ರಗಳಲ್ಲಿ ಯಾವುದೇ ‌ನಿರ್ದಿಷ್ಟ ನಟನಿಗಿಂತ ಕಥೆಯೇ ನಾಯಕತ್ವ ವಹಿಸುತ್ತದೆ. ಶೀಘ್ರದಲ್ಲೇ ಡ್ರಾಪ್ 2 ಮತ್ತು ಡ್ರಾಪ್ 3 ವಿಡಿಯೋ ರಿಲೀಸ್ ಮಾಡುವುದಾಗಿ ತಿಳಿಸಿದರು.

ರಾಜ್​ಕುಮಾರ್ ಹಿರಾನಿ ಅವರು ‘ಡಂಕಿ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅವರ ಸಿನಿಮಾಗಳಲ್ಲಿ ಭಾವನೆಗಳಿಗೆ, ಹಾಸ್ಯಕ್ಕೆ ಹೆಚ್ಚು ಪ್ರಾಧಾನ್ಯತೆ ಇರುತ್ತದೆ. ಎಂತಹುದೇ ಮಾಸ್ ಹೀರೋ ಆದರೂ ಅವರಿಗೆ ಬೇರೆಯದೇ ಗೆಟಪ್ ನೀಡುತ್ತಾರೆ. ‘ಡಂಕಿ’ ಚಿತ್ರದಲ್ಲೂ ಅದು ಮುಂದುವರಿದಿದೆ. ಶಾರುಖ್ ಖಾನ್ ಅವರು ಕ್ಲಾಸ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಶಾರುಖ್ ಖಾನ್ ಜೊತೆ ಈ ಚಿತ್ರದಲ್ಲಿ ತಾಪ್ಸೀ ಪನ್ನು, ಬೋಮನ್ ಇರಾನಿ, ವಿಕ್ಕಿ ಕೌಶಲ್, ಅನಿಲ್ ಗ್ರೋವರ್, ವಿಕ್ರಮ್ ಕೊಚ್ಚರ್ ನಟಿಸಿದ್ದಾರೆ. ಪ್ರೀತಿ ಮತ್ತು ಸ್ನೇಹದ ಕಥೆಯಾಗಿರುವ ಡಂಕಿ ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ಅಭಿಜಾತ್ ಜೋಷಿ, ರಾಜ್‌ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಕಥೆ ಬರೆದಿದ್ದಾರೆ. ಡಂಕಿ ಸಿನಿಮಾ ಕ್ರಿಸ್ಮಸ್ ಗೆ ವಿಶ್ವಾದ್ಯಂತ ರಿಲೀಸ್ ಆಗಲಿದೆ.


Spread the love

LEAVE A REPLY

Please enter your comment!
Please enter your name here