ಬೆಂಗಳೂರು:- ಪಟಾಕಿ ಸಿಡಿಸುವ ವಿಚಾರಕ್ಕೆ ಕಿರಿಕ್ ತೆಗೆದು ಎದುರು ಮನೆಯವರ ಮೇಲೆ ಯುವಕನೋರ್ವ ಹಲ್ಲೆ ನಡೆಸಿದ ಘಟನೆ ನಗರದ ಬಾಣಸವಾಡಿ ಠಾಣೆ ವ್ಯಾಪ್ತಿಯ ಲಿಂಗರಾಜಪುರದಲ್ಲಿ ಜರುಗಿದೆ.
ಅವಾಚ್ಯ ಶಬ್ದಗಳಿಂದ ನಿಂದಿಸಿ ಯುವಕ ಹಲ್ಲೆ ಮಾಡಿದ ಘಟನೆ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ತಂದೆ ಹಾಗೂ ಮಗನ ವಿರುದ್ಧ ಎದುರು ಮನೆಯವರು ದೂರು ನೀಡಿದ್ದಾರೆ.
ದೂರಿನ ಅನ್ವಯ ತಂದೆ ಯೇಸುದಾಸ್ ಹಾಗೂ ಮಗ ರಿಚಾರ್ಡ್ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಮೊದಲಿಗೆ ಮನೆ ಎದುರು ಪಟಾಕಿ ಹೊಡೆಯಬೇಡಿ ಎಂದಿದ್ದಕ್ಕೆ ಗಲಾಟೆ ಶುರುವಾಗಿದೆ. ಅಕ್ಟೋಬರ್ 31ರಂದು ತಂದೆ ಯೇಸುದಾಸ್ ನಿಂದ ರಾಡ್ ನಿಂದ ಹಲ್ಲೆಗೆ ಯತ್ನಿಸಲಾಗಿದೆ.
ಮಾರನೇ ದಿನ ನೆವಂಬರ್ 1ರಂದು ಯೇಸುದಾಸ್ ಮಗ ರಿಚಾರ್ಡ್ ನಿಂದ ಗಲಾಟೆ ನಡೆದಿದೆ. ಎದುರು ಮನೆಯವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆದಿದೆ.
ಮಗ ರಿಚಾರ್ಡ್ ಹಲ್ಲೆ ಮಾಡ್ತಿರುವ ವಿಡಿಯೋ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದೆ. ಹೀಗಾಗಿ ಸಾಕ್ಷಿ ಸಮೇತ ಪೊಲೀಸರು ತನಿಖೆ ಕೈಗೊಂಡಿದ್ದಾರೆ.