ದೊಡ್ಡಬಳ್ಳಾಪುರ : ಫೋಟೋ ಶೂಟ್ ಮಾಡುವ ವೇಳೆ ಎರಡು ಗುಂಪುಗಳ ನಡುವೆ ಜಗಳವಾಗಿದ್ದು, ಗಲಾಟೆಯ ಅವೇಶದಲ್ಲಿ ಯುವಕನ ಎದೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವದ ಬಳಿ ಇರುವ ಡಾಬಾದ ಮುಂಭಾಗದಲ್ಲಿ ನಿನ್ನೆ ಸಂಜೆ ಘಟನೆ ನಡೆದಿದ್ದು, ಘಟನೆಯಲ್ಲಿ ದೊಡ್ಡಬಳ್ಳಾಪುರ ನಗರದ ಕಛೇರಿಪಾಳ್ಯದ ನಿವಾಸಿ ಸೂರ್ಯ (22) ಕೊಲೆಯಾಗಿದ್ದಾನೆ.
ಮೃತ ಯುವಕ ಐಟಿಐ ವಿದ್ಯಾರ್ಥಿಯಾಗಿದ್ದು, ದೀಪಾವಳಿಯ ರಜೆ ಹಿನ್ನಲೆ ಫೋಟೋ ಶೂಟ್ ಗಾಗಿ ಹೋಗಿದ್ದ ವೇಳೆ ಘಟನೆ ನಡೆದಿದೆ.
ಕೊಲೆಯಾದ ಯುವಕ ಸೂರ್ಯ ರಿಲ್ಸ್‌ಗಳನ್ನ ಮಾಡುತ್ತಿದ್ದ, ರಿಲ್ಸ್ ಗಾಗಿ ವಿಡಿಯೋ ಮಾಡಲು ಮತ್ತು ಫೋಟೋ ಶೂಟ್ ಅಂತ ಸ್ನೇಹಿತರ ಜೊತೆ ರಾಮೇಶ್ವರದ ಬಳಿಯ ಡಾಬಾಕ್ಕೆ ಹೋಗಿದ್ದ, ಡಾಬಾಗ ಮುಂಬಾಗದ ಅಲಂಕಾರಿಕ ಸೀನರಿ ಮುಂದೆ ಪೋಟೋ ಸೂಟ್ ಮಾಡಲಾಗುತ್ತಿತ್ತು.
ಈ ವೇಳೆ ಯುವಕರ ಮತ್ತೊಂದು ಗುಂಪು ಫೋಟೋ ತೆಗೆಯುವಂತೆ ಕಿರಿಕ್ ತೆಗೆದಿದೆ, ಈ ಗಲಾಟೆಯಲ್ಲಿ ಅಪರಿಚಿತ ಯುವಕರ ಗ್ಯಾಂಗ್ ನಲ್ಲಿದ್ದ ಯುವಕನೊಬ್ಬ ಸೂರ್ಯನ ಎದೆಗೆ ಚಾಕುವಿನಿಂದ ಚುಚ್ಚಿದ್ದಾನೆ, ಗಾಯಗೊಂಡಿದ್ದ ಸೂರ್ಯನನ್ನ ಆಸ್ಪತ್ರೆಗೆ ಸಾಗಿಸಲಾಗಿತು, ಆದರೆ ತೀವ್ರ ರಕ್ತಸ್ರಾವದಿಂದ ಸೂರ್ಯ ಸಾವನ್ನಪ್ಪಿದ್ದಾನೆ.