ವಿಜಯಸಾಕ್ಷಿ ಸುದ್ದಿ, ಗದಗ: ಸ್ವಾಭಿಮಾನದ ಪ್ರತೀಕ, ಸೂರ್ಯ ಮುಳುಗದ ಸಾಮ್ರಾಜ್ಯ ಕಿತ್ತೂರ ಸಂಸ್ಥಾನದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ದಿಟ್ಟ ಮಹಿಳೆ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ 201ನೇ ವಿಜಯೋತ್ಸವ ಹಾಗೂ 247ನೇ ಜಯಂತಿಉತ್ಸವದ ಅಂಗವಾಗಿ ವೀರರಾಣಿ ಚೆನ್ನಮ್ಮಾಜಿಯ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ವಿಜಯಕುಮಾರ್ ಗಡ್ಡಿ, ವಿಜಯೋತ್ಸವ ಸಮಿತಿ ಅಧ್ಯಕ್ಷ ಎಮ್.ಎಸ್. ಕರಿಗೌಡ್ರ, ಶಾಂತಣ್ಣ ಮುಳವಾಡ, ಎಫ್.ವಿ. ಮರಿಗೌಡ್ರ, ಈರಣ್ಣ ಕರಿಬಿಷ್ಠಿ, ಮಹೇಶ ಕರಿಬಿಷ್ಠಿ, ಚನ್ನವೀರಪ್ಪ ಮಳಗಿ, ನಿಂಗನಗೌಡ ಹಿರೇಮನಿಪಾಟೀಲ, ಕಾಶಪ್ಪ ಗದಗಿನ, ಯುವ ಘಟಕದ ಅಧ್ಯಕ್ಷ ಅಯ್ಯಪ್ಪ ಅಂಗಡಿ, ಚಂದ್ರು ಪಾಟೀಲ, ಮಂಜು ಬಾಣದ, ಮಂಜುನಾಥ ಗುಡದೂರ, ಸಂಗಮೇಶ ಗೊಂದಿ, ಚೇತನ ಅಬ್ಬಿಗೇರಿ, ಕಿರಣ ಕಮತರ, ಸ್ವಾತಿ ಅಕ್ಕಿ, ಜಯಶ್ರೀ ಉಗಲಾಟದ, ಶೋಭಾ ಪಾಟೀಲ, ಸಂಕಣ್ಣವರ, ಕುಮಾರ ಹೊಂಬಳ, ಈರಮ್ಮ ತಾಳಿಕೋಟಿ, ಆನಂದ ಸುಳಿಕಲ್ಲ ಮುಂತಾದವರಿದ್ದರು.