ವಿಜಯಸಾಕ್ಷಿ ಸುದ್ದಿ, ಗದಗ: ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಘ ಬೆಟಗೇರಿ-ಗದಗ ವತಿಯಿಂದ ಭಾರತದ ಬೆಳ್ಳಿಚುಕ್ಕಿ, ವೀರರಾಣಿ ಕಿತ್ತೂರು ಚೆನ್ನಮ್ಮರ 201ನೇ ವಿಜಯೋತ್ಸವ ಮತ್ತು 247ನೇ ಜಯಂತ್ಯುತ್ಸವ ಕಾರ್ಯಕ್ರಮ ಗುರುವಾರ ಬೆಟಗೇರಿಯ ಉಸಗಿಕಟ್ಟಿ ಓಣಿಯಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಅಜ್ಜನಗೌಡ ಹಿರೇಮನಿ ಪಾಟೀಲ ಮಾತನಾಡಿ, ವೀರರಾಣಿ ಕಿತ್ತೂರು ಚೆನ್ನಮ್ಮ ಭಾರತದ ಇತಿಹಾಸದಲ್ಲಿಯೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಅವರ ಧೈರ್ಯ, ಸಾಹಸ ಮತ್ತು ದೇಶಭಕ್ತಿ ನಮಗೆಲ್ಲ ಆದರ್ಶವಾಗಿದೆ ಎಂದು ನುಡಿದರು.
ಅಂದಪ್ಪ ಮುಳ್ಳಾಳ ಹಾಗೂ ಆನಂದ ಹೊಸಮನಿಯವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ. ಈರಣ್ಣ ಮಾನೇದ, ಅಜ್ಜನಗೌಡ ಹಿರೇಮನಿ ಪಾಟೀಲ, ಬಸವರಾಜ ಕುಂದಗೋಳ, ನೀಲಪ್ಪ ಪಲ್ಲೇದ, ಪರಮೇಶ್ವರಗೌಡ ಮಲ್ಲನಗೌಡ್ರ, ಮುದಕಪ್ಪ ಪಲ್ಲೇದ, ಬಸಪ್ಪ ಪಿರಂಗಿ, ನಾಗಪ್ಪ ಉಪಸಣ್ಣವರ, ಬಸಪ್ಪ ಬಂಡಿ, ಮಹಾದೇವಪ್ಪ ಪಲ್ಲೇದ, ಚನ್ನಪ್ಪ ಗುಡದೂರ, ದೇವಿಧರ ಬನ್ನಿಕೊಪ್ಪ, ಶಂಕರಪ್ಪ ಮಾಳಶೆಟ್ಟಿ, ಎನ್.ಎಲ್. ಮೆಣಸಗಿ, ಶಿವಾನಂದ ಮಾನೇದ, ಅಂದಪ್ಪ ಮುಳ್ಳಾಳ, ಬಸವರಾಜ ಪಲ್ಲೇದ, ರವಿರಾಜ ಮಾನೇದ, ಕಳಕಪ್ಪ ಮಾನೇದ, ಈರಣ್ಣ ಬೂದಿಹಾಳ, ಕಲ್ಯಾಣಪ್ಪ ಹೋಳಿ, ಮಂಜುನಾಥ ಮಾನೇದ, ಮಲ್ಲಪ್ಪ ಮ. ಪಲ್ಲೇದ, ಶಿವಣ್ಣ ನಾಗರಾಳ, ಅಶೋಕ ಕೊಂಡಿಕೊಪ್ಪ, ಆನಂದ ಹೊಸಮನಿ ಮುಂತಾದವರು ಇದ್ದರು.