ವಿಜಯಸಾಕ್ಷಿ ಸುದ್ದಿ, ಮುಳಗುಂದ: ಬ್ರಿಟಿಷರ ವಿರುದ್ಧ ಸಮರ ಸಾರಿದ ಕಿತ್ತೂರು ರಾಣಿ ಚೆನ್ನಮ್ಮ ಈ ನಾಡಿನ ಸ್ವಾಭಿಮಾನದ ಸಂಕೇತ ಎಂದು ಪ.ಪಂ ಸದಸ್ಯ ಕೆ.ಎಲ್. ಕರಿಗೌಡರ ಹೇಳಿದರು.
Advertisement
ಅವರು ಪಟ್ಟಣ ಪಂಚಾಯತಿ ಸಭಾಭವನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ದೇಶದಿಂದ ಬ್ರಿಟಿಷರನ್ನು ಓಡಿಸಬೇಕು ಎಂದು ಪಣತೊಟ್ಟು ಹೋರಾಡಿದ ಚೆನ್ನಮ್ಮಳ ಕೆಚ್ಚದೆಯ ಹೋರಾಟವನ್ನು ಯುವ ಜನರು ಅರಿತುಕೊಳ್ಳಬೇಕು ಎಂದರು.
ಪ.ಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ, ಪ.ಪಂ ಅಧ್ಯಕ್ಷೆ ಯಲ್ಲವ್ವ ಕವಲೂರ, ಸದಸ್ಯರಾದ ವಿಜಯ ನೀಲಗುಂದ, ನಾಗರಾಜ ದೇಶಪಾಂಡೆ, ಬಸವರಾಜ ಹಾರೋಗೇರಿ, ಬಿ.ವಿ. ಸುಂಕಾಪೂರ, ಎ.ಡಿ. ಮುಜಾವಾರ, ರಾಮಣ್ಣಾ ಕಮಾಜಿ, ಅನೂಪ ಕೆಂಚನಗೌಡರ, ಶರಣಪ್ಪ ಕಮಾಜಿ, ರವಿ ಬಳಿಗೇರ, ಮಾಹಾಂತೇಶ ಕಣವಿ ಇದ್ದರು.