KL Rahul: ಜನ್ಮದಿನದಂದೇ ಮಗಳ ಹೆಸರು ರಿವೀಲ್‌ ಮಾಡಿದ ಕೆ.ಎಲ್.ರಾಹುಲ್, ಅಥಿಯಾ ಶೆಟ್ಟಿ!

0
Spread the love

ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಬ್ಯಾಟರ್​ ಕನ್ನಡಿಗ ಕೆಎಲ್​ ರಾಹುಲ್​ ಇಂದು 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2014ಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿರುವ ರಾಹುಲ್​ ಅಂದಿನಿಂದಲೂ ಸಕ್ರಿಯರಾಗಿದ್ದಾರೆ. ಸದ್ಯ ಭಾರತ ತಂಡದ ಭರವಸೆಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಟೆಸ್ಟ್​, ಏಕದಿನ ಪಂದ್ಯಗಳನ್ನು ಆಡುತ್ತಿರುವ ರಾಹುಲ್​ ಟಿ-20 ರಾಷ್ಟ್ರೀಯ ತಂಡಕ್ಕೂ ಕಮ್​ಬ್ಯಾಕ್​ ಮಾಡಲು ಸಜ್ಜಾಗಿದ್ದಾರೆ.

Advertisement

ಇನ್ನೂ ಜನ್ಮದಿನದಂದೇ ಕ್ರಿಕೆಟಿಗ ತಮ್ಮ ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್.ರಾಹುಲ್ ಇತ್ತೀಚೆಗಷ್ಟೇ ಪೋಷಕರಾಗಿ ಭಡ್ತಿ ಪಡೆದಿದ್ದಾರೆ. ಇಂದು ತಮ್ಮ ಮುದ್ದು ಮಗಳ ಮೊದಲ ನೋಟವನ್ನು ಒದಗಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸದ್ದು ಮಾಡಿದ್ದಾರೆ. ಸುಂದರ ಕುಟುಂಬದ ಫೋಟೋ ಜೊತೆಗೆ, ಮಗಳ ಹೆಸರು ಮತ್ತು ಅರ್ಥವನ್ನೂ ತಿಳಿಸಿದ್ದಾರೆ.

ಏಪ್ರಿಲ್ 18. ಕೆ.ಎಲ್.ರಾಹುಲ್ 33ನೇ ಹುಟ್ಟುಹಬ್ಬ. ಮಗಳು ಮತ್ತು ಪತ್ನಿಯೊಂದಿಗೆ ಸುಂದರ ಫೋಟೋ ಅವರು ಶೇರ್ ಮಾಡಿದ್ದಾರೆ. ಫೋಟೋ ಬಹಳ ಮುದ್ದಾಗಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಗಳಿಗೆ ‘ಇವಾರಾ’ ಎಂದು ಹೆಸರಿಡಲಾಗಿದೆ. ತಮ್ಮ ವಿಶೇಷ ದಿನದಂದು ಮಗಳ ಹೆಸರು ಬಹಿರಂಗಪಡಿಸಿ ಅಭಿಮಾನಿಗಳಲ್ಲಿ ಖುಷಿ ತರಿಸಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ಸತತ ಏಳು ಅರ್ಧಶತಕ ಸಿಡಿಸಿರುವ ಏಕೈಕ ಭಾರತೀಯ ಬ್ಯಾಟರ್​ ಎಂಬ ದಾಖಲೆ ಕೆಎಲ್​ ರಾಹುಲ್​ ಹೆಸರಲ್ಲಿದೆ. 2017 ರಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧದ ಟೆಸ್ಟ್​ ಪಂದ್ಯಗಳಲ್ಲಿ ಸತತ 7 ಅರ್ಧಶತಕ ಸಿಡಿಸಿದ್ದರು. ಇಂದಿಗೂ ಈ ದಾಖಲೆ ಮುರಿಯಲು ಯಾವುದೇ ಭಾರತೀಯ ಬ್ಯಾಟರ್​ಗೂ ಸಾಧ್ಯವಾಗಿಲ್ಲ.

 


Spread the love

LEAVE A REPLY

Please enter your comment!
Please enter your name here