ಬೆಂಗಳೂರು:- ಕಾಂಗ್ರೆಸ್ ಗೆ ಮಾಜಿ ಸಚಿವ ಕೆಎನ್ ರಾಜಣ್ಣ ಅವರೇ ಕೊಳ್ಳಿ ಇಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯವಾಡಿದರು.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕೆಎನ್ ರಾಜಣ್ಣರೇ ಕಾಂಗ್ರೆಸ್‌ಗೆ ಕೊಳ್ಳಿ ಇಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಡಿಕೆಶಿ ಫೇಲ್ಯೂರ್ ಅಂತಾ ಪತ್ರ ಬರೆದಿದ್ದಾರೆ. ಕೇಂದ್ರದವರು ಕೂಡ ನಿಮ್ಮ ಸಹವಾಸ ಬೇಡ ಎಂದಿದ್ದಾರೆ. ತೀರ್ಮಾನ ತೆಗೆದುಕೊಳ್ಳದ ವೀಕ್ ನಾಯಕತ್ವ ಅಂದರೆ ಕಾಂಗ್ರೆಸ್ ನಾಯಕತ್ವ ಎಂದು ಟೀಕಿಸಿದರು.
ಸಿದ್ದರಾಮಯ್ಯ ಅಧಿಕಾರ ಕೊಡಲ್ಲ, ಡಿ.ಕೆ.ಶಿವಕುಮಾರ್ ದೇವಸ್ಥಾನ ಬಿಡಲ್ಲ. ಕರ್ನಾಟಕದಲ್ಲಿ ಇಷ್ಟೇ ನಡೆಯುತ್ತಿರೋದು. ಸಿದ್ದರಾಮಯ್ಯ ಗ್ಯಾಂಗ್ ಡಿನ್ನರ್ ಪಾಲಿಟಿಕ್ಸ್ ಮಾಡುತ್ತಿದೆ. ಡಿ.ಕೆ.ಶಿವಕುಮಾರ್ ಟೆಂಪಲ್ ರನ್ ಮಾಡುತ್ತಿದ್ದಾರೆ. ಅಧಿವೇಶನಕ್ಕೆ ಡಿ.ಕೆ.ಶಿವಕುಮಾರ್ ಬರುತ್ತಿರಲಿಲ್ಲ. ಅಧಿವೇಶನ ನಡೆಯುತ್ತಿರುವಾಗ ಜನಪ್ರತಿನಿಧಿಯಾಗಿ ಕೆಲಸ ಮಾಡಬೇಕಿತ್ತು. ಅದು ಬಿಟ್ಟು ಜನರ ತೆರಿಗೆ ಹಣದಲ್ಲಿ ದೇವಸ್ಥಾನ ರೌಂಡ್ ಹಾಕುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.



