ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿ ಶೀಟರ್ ಬರ್ಬರ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಪಟ್ಟಣ ಗ್ರಾಮದಲ್ಲಿ ನಡೆದಿದೆ. ಸೋಮು ತಾಳಿಕೋಟೆ (40) ಬರ್ಬರವಾಗಿ ಕೊಲೆಯಾದ ರೌಡಿ ಶೀಟರ್ ಆಗಿದ್ದು, ಪಟ್ನಾ ಹತ್ತಿರ ಕೊಲೆ ಮಾಡಿ ರೈಲ್ವೆ ಹಳಿ ಬಳಿ ದುಷ್ಕರ್ಮಿಗಳು ಬಿಸಾಕಿದ್ದಾರೆ.
Advertisement
ಕೆಲ ತಿಂಗಳ ಹಿಂದೆ ಸೋಮು ಪಟ್ಟಣ ಗ್ರಾಮದ ಡಾಬಾ ಮಾಲೀಕನ ಜೊತೆ ಈತ ಜಗಳವಾಡಿದ್ದನು. ಅಲ್ಲದೆ ಸೋಮು ಮತ್ತು ಆತನ ಸಂಗಡಿಗರು ಡಾಬಾ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಹೀಗಾಗಿ ಹಳೆಯ ವೈಷಮ್ಯದ ಹಿನ್ನೆಲೆ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.