ಕೊಡಗು:- ಜಿಲ್ಲೆಯ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ಕಾಫಿ ತೋಟದಲ್ಲಿ 14 ಅಡಿ ಉದ್ದದ ಭಾರಿ ಗಾತ್ರದ ಕಾಳಿಂಗ ಸರ್ಪವನ್ನ ಸೆರೆಹಿಡಿಯಲಾಗಿದೆ.
Advertisement
  
ಇಲ್ಲಿನ ಕನ್ನಂಬೀರ ಪವನ್ ಪೂವಯ್ಯ ಎಂಬವರ ಕಾಫಿ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಸುಮಾರು 14 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ ಪತ್ತೆಯಾಗಿದೆ.
ಬಳಿಕ ಉರಗ ತಜ್ಞರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಪ್ರಜ್ವಲ್ ಕುಮಾರ್ ಅವರು, ಹಾವನ್ನು ಹಿಡಿದು ಮಾಕುಟ ರಕ್ಷಿತಾ ಅರಣ್ಯದಲ್ಲಿ ಬಿಡುವುದರ ಮೂಲಕ ಕಾಳಿಂಗ
ಸರ್ಪವನ್ನು ರಕ್ಷಿಸಿದ್ದಾರೆ.


