ಕೊಡಗು:- ಕೊಡಗು ಕೇರಳ ಗಡಿ ಕರಿಕೆಯಲ್ಲಿ ಜೆಸಿಬಿ ಆಪರೇಟರ್ ಶವ ಪತ್ತೆಯಾಗಿರುವ ಘಟನೆ ಜರುಗಿದೆ.
Advertisement
ಕಳೆದ 4 ದಿನಗಳಿಂದ ಕಣ್ಮರೆಯಾಗಿದ್ದ ಜೆಸಿಬಿ ಆಪರೇಟರ್ ಶವ ಇದೀಗ ಪತ್ತೆಯಾಗಿದ್ದು, ಮೃತ ಯುವಕನನ್ನು ಬೆಳಗಾವಿ ಮೂಲದ ಅನಿಲ್ (20) ಎಂದು ಗುರುತಿಸಲಾಗಿದೆ.
ಸೇತುವೆಯಲ್ಲಿ ಬೈಕ್ ದಾಟಿಸುವಾಗ ನೀರಿನಲ್ಲಿ ಯುವಕ ಕೊಚ್ಚಿಹೋಗಿದ್ದ. ಇವನ ಪತ್ತೆಗಾಗಿ ಕೊಡಗು ಹಾಗೂ ಕೇರಳ ರಕ್ಷಣಾ ತಂಡ ರಕ್ಷಣಾ ಕಾರ್ಯಚರಣೆ ನಡೆಸಿತ್ತು.
ಇದೀಗ ಕರಿಕೆ ಹೊಳೆಯಲ್ಲಿ ಅನಿಲ್ ಮೃತದೇಹ ಪತ್ತೆಯಾಗಿದೆ. ಯುವಕನ ಶವ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.