ಕೊಡಗು:- 18 ವರ್ಷಗಳ ಹಿಂದೆ ಗೋವಾದಲ್ಲಿ ಕೊಲೆಯಾಗಿದ್ದ, ಇಲ್ಲಿನ ಅಯ್ಯಂಗೇರಿಯ 13 ವರ್ಷದ ಬಾಲಕಿ ಸಫಿಯಾ ಅಂತ್ಯಸಂಸ್ಕಾರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆಯಿತು.
2006ರಲ್ಲಿ ಕಾಣೆಯಾಗಿದ್ದ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಅಯ್ಯಂಗೇರಿ ಗ್ರಾಮದ ಬಾಲಕಿ ಹತ್ಯೆಯಾಗಿದ್ದಾಳೆ ಎನ್ನುವುದು ತಿಳಿದುಬಂದಿದ್ದು, ಬರೋಬ್ಬರಿ 18 ವರ್ಷಗಳ ನಂತರ ಗೋವಾದ ಡ್ಯಾಂ ಒಂದರ ಬಳಿ ಹೂತಿಟ್ಟಿರುವುದು ಪತ್ತೆಯಾಗಿದೆ.
ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಅಯ್ಯಂಗೇರಿ ಗ್ರಾಮದ ಬಡ ಕುಟುಂಬ ಇವರದ್ದು ಮೊಯ್ದು ಅವರಿಗೆ ಇಬ್ಬರು ಹೆಣ್ಣು ಇಬ್ಬರು ಗಂಡು ಮಕ್ಕಳು. ಮೊದಲ ಮಗಳು ಸಫಿಯಾಳನ್ನ ಕೇರಳದ ಕಾಸರಗೋಡಿನ ಹಂಸ ಎಂಬುವರ ಮನಯಲ್ಲಿ ಮನೆ ಕೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿರುತ್ತಾಳೆ. ಆದ್ರೆ ಆಕೆ ಒಂದಿನ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಳು.
ಈ ಬಗ್ಗೆ ಮೂರು ತಿಂಗಳು ಕಳೆದರೂ ಹಂಸನ ಕುಟುಂಬ ಏನೂ ಮಾಹಿತಿ ನೀಡುವುದಿಲ್ಲ ಕೊನೆಗೆ ಅಯ್ಯಂಗೇರಿ ಗ್ರಾಮಸ್ಥರು ಹಾಗೂ ಕಾಸರಗೋಡಿನ ಕೆವು ಸಾಮಾಜಿಕ ಸಂಘಟನೆಗಳು ಸೇರಿ ಅಲ್ಲಿ 86 ದಿನಗಳ ನಿರಂತರ ಪ್ರತಿಭಟನೆ ಮಾಡಿದ ಫಲವಾಗಿ ಕಾಸರಗೋಡು ಪೊಲೀಸರು ಹಂಸನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಸಫಿಯಾಳನ್ನು ಕೊಲೆ ಮಾಡಿ ಗೋವಾದ ಡ್ಯಾಂ ಒಂದರ ಬಳಿ ಹೂತಿಟ್ಟಿರುವುದು ಬಾಯ್ಬಿಟ್ಟಿದ್ದಾನೆ.
ಕೊನೆಗೆ ಸ್ಥಳಕ್ಕೆ ತೆರಳಿನೋಡಿದಾಗ 20 ಅಡಿ ಆಳದ ಗುಂಡಿಯಲ್ಲಿ ಸಫಿಯಾಳ ಅಸ್ತಿಪಂಜರ ಪತ್ತೆಯಾಗಿದೆ. ಈ ಪ್ರಕರಣದ ವಿಚಾರಣೆ ನಡೆದು ಆರೋಪಿ ಹಂಸ, ಆತನ ಪತ್ನಿ ಹಾಗೂ ಸಹೋದರನಿಗೆ ಶಿಕ್ಷೆಯಾಗಿದೆ. ಆದ್ರೆ, ಇದನ್ನು ಪ್ರಶ್ನಿಸಿ ಹಂಸ ಹೈಕೋರ್ಟ್ ಮೆಟ್ಟಿಲೇರಿದ್ದಾನೆ.
ಅಲ್ಲಿಯೂ ಬಹಳ ವರ್ಷಗಳ ಕಾಲ ಕೇಸ್ ನಡೆದು 2019ರಲ್ಲಿ ಅಲ್ಲಿಯೂ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ. ಆದರೂ ಸಫಿಯಾಳ ಅಸ್ತಿಪಂಜರ ಪೋಷಕರಿಗೆ ಸಿಗೋದಿಲ್ಲ. ಕೊನೆಗೆ ಇದೀಗ ಮೊಯ್ದು ಕುಟುಂಬ ಕಾಸರಗೋಡಿಗೆ ತೆರಳಿ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸಫಿಯಾಳ ಅಸ್ತಿಪಂಜರ ಕುಟುಂಬಕ್ಕೆ ಹಸ್ತಾಂತರವಾಗಿದೆ.