ಕೊಹ್ಲಿ ಮತ್ತು ಗಂಭೀರ್ ನಡುವಿನ ಗಲಾಟೆ ಮುಗಿದ ಅಧ್ಯಾಯ ಎಂಬುದಾಗಿ ಭಾರತ ತಂಡದ ಮಾಜಿ ಸ್ಪಿನ್ನರ್ ಅಮಿತ್ ಮಿಶ್ರಾ ಹೇಳಿದ್ದಾರೆ. ಗೌತಮ್ ಗಂಭೀರ್ ಅವರು ವಿರಾಟ್ ಕೊಹ್ಲಿ ಅವರೊಂದಿಗಿನ ಜಗಳವನ್ನು ಕೊನೆಗೊಳಿಸಿದ್ದಾರೆ. ಐಪಿಎಲ್ 2023 ರ ಋತುವಿನಲ್ಲಿ ಆರ್ಸಿಬಿ ಮತ್ತು ಎಲ್ಎಸ್ಜಿ ಲಖನೌ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಮುಖಾಮುಖಿಯಾದಾಗ ಗಂಭೀರ್ ಮತ್ತು ಕೊಹ್ಲಿ ಮೈದಾನದಲ್ಲೇ ವಾಗ್ವಾದದಲ್ಲಿ ತೊಡಗಿದ್ದರು. ಇಬ್ಬರೂ ನವೀನ್-ಉಲ್-ಹಕ್ ವಿಷಯಕ್ಕೆ ತೀವ್ರ ವಾಗ್ವಾದದಲ್ಲಿ ಭಾಗಿಯಾಗಿದ್ದರು. ಮೂವರೂ ಬಿಸಿಸಿಐನಿಂದ ಛೀಮಾರಿ ಹಾಕಿಸಿಕೊಂಡಿದ್ದರು.
ಐಪಿಎಲ್ 2024 ರ ಋತುವಿನಲ್ಲಿ ಗಂಭೀರ್ ಮತ್ತು ಕೊಹ್ಲಿ ನಡುವೆ ಎಲ್ಲವೂ ಬಗೆಹರಿದಿದೆ. ಏಕೆಂದರೆ ಬೆಂಗಳೂರಿನಲ್ಲಿ ನಡೆದ ಕೆಕೆಆರ್ ಮತ್ತು ಆರ್ಸಿಬಿ ನಡುವಿನ ಪಂದ್ಯದ ಸಮಯದಲ್ಲಿ ಇಬ್ಬರೂ ಪರಸ್ಪರ ತಬ್ಬಿಕೊಂಡಿದ್ದರ. ಪಂದ್ಯಕ್ಕೆ ಮುಂಚಿತವಾಗಿ ಕೋಲ್ಕತ್ತಾದಲ್ಲಿ ನಡೆದ ರಿವರ್ಸ್ ಪಂದ್ಯದ ವೇಳೆಯೂ ಸಂಭಾಷಣೆ ನಡೆಸುತ್ತಿರುವುದು ಕಂಡುಬಂದಿದೆ. ಯೂಟ್ಯೂಬರ್ ಶುಭಂಕರ್ ಮಿಶ್ರಾ ಅವರ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್, ಕೊಹ್ಲಿಯೊಂದಿಗಿನ ಭಿನ್ನಾಭಿಪ್ರಾಯ ಕೊನೆಗೊಳಿಸಲು ಗಂಭೀರ್ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಕೆಕೆಆರ್ನ ಮಾಜಿ ಮೆಂಟರ್ ಗಂಭೀರ್, ಕೊಹ್ಲಿಯ ಜತೆ ಅವರ ಕುಟುಂಬದ ಆರೋಗ್ಯ ವಿಚಾರಿಸಿದ್ದರು. ಅವರು ಅಜಗಳವನ್ನು ಕೊನೆಗೊಳಿಸಿದ್ದರು. ಹೀಗಾಗಿ ಅವರಿಬ್ಬರ ನಡುವಿನ ಜಗಳವನ್ನು ಗಂಭೀರ್ ಮುಕ್ತಾಯಗೊಳಿಸಿದ್ದಾರೆ ಎಮದು ಹೇಳಿದ್ದಾರೆ. ಇದೇ ವೇಳೆ ಅಮಿತ್ ಮಿಶ್ರಾ, ಈ ಕೆಲಸವನ್ನು ಕೊಹ್ಲಿ ಮೊದಲು ಮಾಡಬೇಕಾಗಿತ್ತು ಎಂದು ಹೇಳಿದ್ದಾರೆ.
ನಾನು ಅಂದು ಗೌತಮ್ ವಿಚಾರದಲ್ಲಿ ಒಳ್ಳೆಯ ವಿಷಯವನ್ನು ನೋಡಿದೆ. ವಿರಾಟ್ ಕೊಹ್ಲಿ ಗೌತಮ್ ಕಡೆಗೆ ಹೋಗಲಿಲ್ಲ, ಗೌತಮ್ ಅವರ ಕಡೆಗೆ ಹೋದರು. ಅವರೆಏ ಹೋಗಿ ‘ಹೇಗಿದ್ದೀರಿ, ನಿಮ್ಮ ಕುಟುಂಬ ಹೇಗಿದೆ’ ಎಂದು ಕೇಳಿದರು. ಈ ಮೂಲಕ ಜಗಳ ಕೊನೆಗೊಳಿಸಿದ್ದು ಗೌತಮ್ ಹೊರತು ಕೊಹ್ಲಿ ಅಲ್ಲ” ಎಂದು ಅಮಿತ್ ಮಿಶ್ರಾ ಹೇಳಿದ್ದಾರೆ.
“ಗೌತಮ್ ಆ ಸಮಯದಲ್ಲಿ ತಮ್ಮ ವಿಶಾಲ ಹೃದಯ ತೋರಿಸಿದರು. ಕೊಹ್ಲಿ ಹೋಗಿ ಜಗಳವನ್ನು ಕೊನೆಗೊಳಿಸಬೇಕಿತ್ತು. ಅವರೇ ಹೋಗಿ ‘ಗೌತಮ್. ಇದನ್ನು ಕೊನೆಗೊಳಿಸೋಣ’ ಎಂದು ಹೇಳಬೇಕಿತ್ತು” ಎಂದು ಅಮಿತ್ ಮಿಶ್ರಾ ಹೇಳಿದರು.