HomeSports Newsಕೊಹ್ಲಿ ಪ್ಲ್ಯಾನ್ ಠುಸ್: ನೀ ಔಟ್ ಆಗಿದ್ದು ಒಳ್ಳೆದಾಯ್ತು ಎಂದ KL ರಾಹುಲ್.. ವಿರಾಟ್ ಗೆ...

ಕೊಹ್ಲಿ ಪ್ಲ್ಯಾನ್ ಠುಸ್: ನೀ ಔಟ್ ಆಗಿದ್ದು ಒಳ್ಳೆದಾಯ್ತು ಎಂದ KL ರಾಹುಲ್.. ವಿರಾಟ್ ಗೆ ಕನ್ನಡಿಗನ ತಿರುಗೇಟು!

For Dai;y Updates Join Our whatsapp Group

Spread the love

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಚಿತ್ತ ಏಪ್ರಿಲ್ 27ರ ಡೆಲ್ಲಿ ಮ್ಯಾಚ್ ಮೇಲೆ ನೆಟ್ಟಿತ್ತು. ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆಡುತ್ತಿರುವ ಕನ್ನಡಿಗ KL ರಾಹುಲ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB ವಿರುದ್ಧ ಗೆದ್ದ ಬಳಿಕ ತೋರಿದ್ದ ಕಾಂತಾರ ಸೆಲೆಬ್ರೇಷನ್ ಎಲ್ಲರ ಗಮನ ಸೆಳೆದಿತ್ತು. ಹೀಗಾಗಿ ಇದಕ್ಕೆ ಕಿಂಗ್ ಕೊಹ್ಲಿ ಉತ್ತರ ಕೊಟ್ಟೇ ಕೊಡುತ್ತಾರೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಬಾನುವಾರದ ಪಂದ್ಯ ಸಖತ್ ಎಂಟರ್ಟೈನ್ಮೆಂಟ್ ಮಾಡಿದೆ. ಹೌದು, ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು.

ಈ ಗುರಿ ಬೆನ್ನತ್ತಿದ ಆರ್​ಸಿಬಿ ತಂಡವು ಕೇವಲ 26 ರನ್​ಗಳಿಸುವಷ್ಟರಲ್ಲಿ 3 ಪ್ರಮುಖ ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಕೊಹ್ಲಿ ಹಾಗೂ ಕೃನಾಲ್ ಪಾಂಡ್ಯ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಎಚ್ಚರಿಕೆಯ ಆಟದೊಂದಿಗೆ ಇನಿಂಗ್ಸ್ ಕಟ್ಟಿದ ಈ ಜೋಡಿಯು ಶತಕದ ಜೊತೆಯಾಟವಾಡಿದರು. ಇದರ ನಡುವೆ ವಿರಾಟ್ ಕೊಹ್ಲಿ 45 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರೆ, ಕೃನಾಲ್ ಪಾಂಡ್ಯ 38 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದರು. ಈ ಅರ್ಧಶತಕಗಳ ನೆರವಿನೊಂದಿಗೆ ಆರ್​ಸಿಬಿ ತಂಡ 18.3 ಓವರ್​ಗಳಲ್ಲಿ 165 ರನ್ ಬಾರಿಸಿ 6 ವಿಕೆಟ್​ಗಳ ಜಯ ಸಾಧಿಸಿತು.

ಈ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಕೆಎಲ್ ರಾಹುಲ್​ಗೆ ಮೈದಾನದಲ್ಲೇ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದರು. ಏಕೆಂದರೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದ ಬಳಿಕ ಕೆಎಲ್ ರಾಹುಲ್ ಇದು ನನ್ನ ಮೈದಾನ ಎಂದು ವೃತ್ತ ಬರೆದು ಕಾಂತಾರಾ ಸಿನಿಮಾ ಸ್ಟ್ರೈಲ್​ನಲ್ಲಿ ಸಂಭ್ರಮಿಸಿದ್ದರು. ಇದಕ್ಕೆ ಪ್ರತಿಯಾಗಿ ದೆಹಲಿಯಲ್ಲಿ ತಿರುಗೇಟು ನೀಡಲು ಕೊಹ್ಲಿ ಪ್ಲ್ಯಾನ್ ಹಾಕಿಕೊಂಡಿದ್ದರು. ಈ ಪ್ಲ್ಯಾನ್​ನಂತೆ ಕ್ರೀಸ್ ಕಚ್ಚಿ ಆಡಿದ್ದ ವಿರಾಟ್ ಕೊಹ್ಲಿ 18ನೇ ಓವರ್​ನಲ್ಲಿ ಔಟಾದರು. ಹೀಗಾಗಿ ಪಂದ್ಯದ ಬಳಿಕ ಮೈದಾನದಲ್ಲಿ ಕೆಎಲ್ ರಾಹುಲ್​ಗೆ ತಿರುಗೇಟು ನೀಡಲು ಸಾಧ್ಯವಾಗಲಿಲ್ಲ. ಇದನ್ನು ಖುದ್ದು ವಿರಾಟ್ ಕೊಹ್ಲಿಯೇ ಬಹಿರಂಗಪಡಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ನಡುವಣ ಸಂಭಾಷಣೆಯ ವಿಡಿಯೋ ಹಂಚಿಕೊಂಡಿದೆ. ಪಂದ್ಯದ ಬಳಿಕ ನಡೆದ ಈ ಸಂಭಾಷಣೆಯ ನಡುವೆ ವಿರಾಟ್ ಕೊಹ್ಲಿ ಕಾಂತಾರಾ ಸೆಲೆಬ್ರೇಷನ್ ತೋರಿಸಿ ಕೆಎಲ್ ರಾಹುಲ್ ಅವರ ಕಾಲೆಳೆದಿದ್ದರು. ನಾನು ಮ್ಯಾಚ್ ಮುಗಿಸಿದ ಬಳಿಕ ಕಾಂತಾರಾ ಶೈಲಿಯಲ್ಲಿ ಸಂಭ್ರಮಿಸಲು ನಾನು ಪ್ಲ್ಯಾನ್ ರೂಪಿಸಿದ್ದೆ. ಹೀಗೆ ಸೆಲೆಬ್ರೇಷನ್ ಮಾಡಿ ನಿನ್ನನ್ನು ತಬ್ಕೋಬೇಕು ಎಂದು ಅಂದುಕೊಂಡಿದ್ದೆ ಎಂದು ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಜೊತೆ ಹೇಳಿದ್ದಾರೆ. ಇದನ್ನೇ ನಾನು ಕರುಣ್ ನಾಯರ್​ಗೆ ಹೇಳುತ್ತಿದ್ದೆ. ವಿರಾಟ್ ಕೊಹ್ಲಿ ಔಟ್ ಆಗಿದ್ದು ಒಳ್ಳೆದಾಯ್ತು ಎಂದು ಕೆಎಲ್ ರಾಹುಲ್ ಪ್ರತಿಕ್ರಿಯಿಸಿದ್ದಾರೆ.ಇದೀಗ ಈ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!