ಕೋಲಾರ: ಕುಡಿಯಲು ಬೆಟ್ಟಿಂಗ್ ಕಟ್ಟಿ ಕುಡಿದ ಯುವಕ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಪೂಜಾರಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಾರ್ತಿಕ್ (21) ಮೃತಪಟ್ಟ ಯುವಕನಾಗಿದ್ದು,
Advertisement
ಗ್ರಾಮದ ವೆಂಕಟರೆಡ್ಡಿ ಎಂಬುನೊಂದಿಗೆ 5 ಬಾಟಲ್ ಓಸಿ ವಿಸ್ಕ್ ಕುಡಿದರೆ ಹತ್ತು ಸಾವಿರ ರೂಪಾಯಿ ಎಂದು ಬೆಟ್ಟಿಂಗ್ ಕಟ್ಟಿದ್ದರು. ಕುಡಿಯುವ ವೇಳೆ ಕಾರ್ತಿಕ್ ಅಸ್ವಸ್ಥಗೊಂಡಿದ್ದನು.
ತಕ್ಷಣ ಆಸ್ಪತ್ರೆಗೆ ದಾಖಲಿಸಿಲಾಯಿತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಇನ್ನೂ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.