ಕೋಲಾರ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ!

0
Spread the love

ಕೋಲಾರ: ತನ್ನಿಬ್ಬರು ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕಿನ ಕಮ್ಮಸಂದ್ರದಲ್ಲಿ ನಡೆದಿದೆ. ತಿಪ್ಪಮ್ಮ(30) ತನ್ನ ಇಬ್ಬರು ಮಕ್ಕಳನ್ನ ಕುತ್ತಿಗೆ ಹಿಸುಕಿ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ ಆಗಿದ್ದು, ಮೌನೀಶ (7), ನಿತಿನ್ (4) ತಾಯಿ ಯಿಂದಲೆ ಕೊಲೆಯಾದ ಮಕ್ಕಳಾಗಿದ್ದಾರೆ.

Advertisement

ಮಕ್ಕಳ ಕತ್ತು ಹಿಸುಕಿ ಕೊಲೆಗೈದು ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬೆಮೆಲ್ ನಗರ ಠಾಣೆಯ ಪೊಲೀಸರು, ಪತಿ ಮಣಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ‌.


Spread the love

LEAVE A REPLY

Please enter your comment!
Please enter your name here