Kolara Breaking: ಕೃಷಿ ಹೊಂಡದಲ್ಲಿ ಬಿದ್ದು ತಾಯಿ-ಮಗು ದಾರುಣ ಸಾವು!

0
Spread the love

ಕೋಲಾರ:- ಕಾಲು ಜಾರಿ ಕೃಷಿ ಹೊಂಡದಲ್ಲಿ ಬಿದ್ದ ಮಗುವನ್ನು ಕಾಪಾಡಲು ಹೋಗಿ ತಾಯಿಯೂ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೋಲಾರ ತಾಲ್ಲೂಕಿನ ಹೊಗರಿಗೊಲ್ಲಹಳ್ಳಿ ಗ್ರಾಮದಲ್ಲಿ ಜರುಗಿದೆ.

Advertisement

ಮಾಲಾ (30) ಹಾಗೂ ಆಕೆಯ ಮಗ ಚಕ್ರವರ್ತಿ (6) ಮೃತರು. ತಾಯಿ ಜಾನುವಾರುಗಳಿಗೆ ಮೇವು ತರಲು ಹೊಲಕ್ಕೆ ತೆರಳಿದ್ದರು. ಜೊತೆಗೆ ಮಗ ಚಕ್ರವರ್ತಿಯನ್ನೂ ಕರೆದೊಯ್ದಿದ್ದರು. ಈ ವೇಳೆ ಈ ದುರ್ಘಟನೆ ನಡೆದಿದೆ.

ಮೊದಲು ಕಾಲು ಜಾರಿ ಮಗ ಚಕ್ರವರ್ತಿ ಹೊಂಡದಲ್ಲಿ ಬಿದ್ದಿದ್ದು, ಮಗನನ್ನು ರಕ್ಷಿಸಲು ಧಾವಿಸಿದ ತಾಯಿ ಮಾಲಾ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳೀಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ವಿಫಲರಾಗಿದ್ದಾರೆ. ಈ ಬಗ್ಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here