ವಿಜಯಸಾಕ್ಷಿ ಸುದ್ದಿ, ಗದಗ: ಜೈ ಭೀಮ್ ರಾಜ್ಯ ಸಂಘರ್ಷ ಸಮಿತಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ವಾಯ್. ಹುಬ್ಬಳ್ಳಿಯವರು ಕೊಲ್ಲಪ್ಪ ಬ್ಯಾಹಟ್ಟಿಯವರನ್ನು ಸಮಿತಿಯ ಗದಗ ನಗರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಮಾರ್ಗದರ್ಶಕ ಎಸ್.ಎನ್. ಬಳ್ಳಾರಿ ಮಾತನಾಡಿ, ಜೈ ಭೀಮ್ ರಾಜ್ಯ ಸಂಘರ್ಷ ಸಮಿತಿಯು ಸರ್ವ ಜನಾಂಗದವರನ್ನು ಒಳಗೊಂಡು ಸಂಘಟನೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಸಮಿತಿಯ ಉಪಾಧ್ಯಕ್ಷ ಮಂಜುನಾಥ ಎಫ್.ತೌಜಲ್, ರೋಣ ತಾಲೂಕಾಧ್ಯಕ್ಷ ಬಸವರಾಜ ಬದಾಮಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ರಾಷ್ಟ್ರೀನ್ ಜೋಸೆಫ್, ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ರಾಜೇಶ ವಿ.ಶೆಟ್ಟರ್, ಅಲ್ಪಸಂಖ್ಯಾತರ ಯುವ ಘಟಕದ ಜಿಲ್ಲಾಧ್ಯಕ್ಷ ಇಮಾಮಹುಸೇನ ಕುನ್ನಿಬಾವಿ, ಕಾರ್ಯದರ್ಶಿ ಎಸ್.ಕೆ. ಕುನ್ನಿಬಾವಿ, ನಜೀರ ಕುನ್ನಿಬಾವಿ, ಸಹ-ಕಾರ್ಯದರ್ಶಿ ಶಿವಣ್ಣ ಕಡಿವಾಲ, ಯುವ ಘಟಕ ಅಧ್ಯಕ್ಷ ಪ್ರೇಮಕುಮಾರ ಹುಬ್ಬಳ್ಳಿ, ಪರದೀನ ಕಾಟಾಪುರ, ರಫೀಕ ನವಲಗುಂದ, ಮಡಿವಾಳ ಸಮಾಜದ ಮುಖಂಡರಾದ ಕೃಷ್ಣಾ ಮಡಿವಾಳರ, ಆದಿ, ಶ್ರೀಕಾಂತ ಹಲವಾಗಲಿ, ಹೇಮಂತ ಹುಬ್ಬಳ್ಳಿ ಉಪಸ್ಥಿತರಿದ್ದರು.