ಹುಬ್ಬಳ್ಳಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಸಚವರೇ ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಹೇಳಿಕೆಗಳನ್ನು ನೀಡುತ್ತ್ತಿದ್ದಾರೆ. ಇನ್ನು ಪಕ್ಷದಲ್ಲಿ ಬಣ ರಾಜಕೀಯ ಶುರುವಾಗಿದ್ದು, ಕೆಲ ಶಾಸಕರು ಮತ್ತು ಸಚಿವರು ನಾನು ಸಿಎಂ ಸಿದ್ದರಾಮಯ್ಯ ಪರ ಮತ್ತು ಇನ್ನು ಕೆಲ ಶಾಸಕರು ಮತ್ತು ಸಚಿವರು ನಾನು ಡಿಸಿಎಂ ಡಿಕೆ ಶಿವಕುಮಾರ್ ಪರ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಡುತ್ತಿದ್ದಾರೆ.
ಈ ಎರಡು ವಿಚಾರಗಳು ಪಕ್ಷದ ವರ್ಚಸ್ಸಿಗೆ ಮತ್ತು ಸರ್ಕಾರಕ್ಕೆ ಸಂಕಟ ತಂದಿವೆ. ಈ ಬಗ್ಗೆ ಯಾರು ಹೇಳಿಕೆ ನೀಡಬಾರದು ಎಂದು ಸಿಎಂ ಮತ್ತು ಡಿಸಿಎಂ ಸೂಚನೆ ನೀಡಿದ್ದಾರೆ. ಆದರೂ ಕೂಡ ನವಲಗುಂದ ಶಾಸಕ ಕೋನರೆಡ್ಡಿ ನಾನೇ ಸಿಎಂ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ಹುಬ್ಬಳ್ಳಿ ತಾಲೂಕಿನ ಕುಸಗಲ್ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಚಿವ ಸಂತೋಷ್ ಲಾಡ್ ಮತ್ತು ಶಾಸಕ ಕೋನರೆಡ್ಡಿ ನಡೆಸಿರುವ ಸಂಭಾಷಣೆ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಸಚಿವ ಸಂತೋಷ್ ಲಾಡ್,
ನಾನು ಗೃಹ ಸಚಿವ ಜಿ ಪರಮೇಶ್ವರ್ ಅವರ ಪರ ಎಂದು ಹೇಳಿದ್ದಾರೆ. ಮತ್ತು ಶಾಸಕ ಕೋನರೆಡ್ಡಿ ನಾನೇ ಸಿಎಂ ಎಂದಿದ್ದಾರೆ. ನಮ್ಮನ್ನು ಸರಿಯಾಗಿ ನೋಡಿಕೊಳ್ಳಬೇಕು ನಾವು ಹೋಮ್ ಮಿನಿಸ್ಟರ್ ಕಡೆಯವರು. ಹೀಗೆಲ್ಲ ನೋಡಿಕೊಂಡರೆ ಹೇಗೆ? ಹೌದು ನಾವು ಹೋಮ್ ಮಿನಿಸ್ಟರ್ ಕಡೆಯವರೇ. ಅವರ ಯಾರ ಕಡೆಯಾದರೂ ಇರಲಿ, ನಾವು ಮಾತ್ರ ಹೋಮ್ ಮಿನಿಸ್ಟರ್ ಕಡೆಯವರು ಎಂದು ಎರಡು ಬಾರಿ ಉಚ್ಚರಿಸಿದರು. ಸಂತೋಷ್ ಲಾಡ್: ಈತ ಯಾವ ಸಿಎಂ, ಹೋಮ್ ಮಿನಿಸ್ಟರ್ ಇದ್ದಲ್ಲೇ ಇವನು ಸಿಎಂ. ನಮ್ಮ ಸಿಎಂ ಇವನೇ, ಅವರು ಯಾರು ಎಂದು ಸಚಿವ ಸಂತೋಷ್ ಲಾಡ್ ಹೇಳಿದರು. ಉಭಯ ನಾಯಕರ 48 ಸೆಕೆಂಡಿನ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.