ಕೊಪ್ಪಳ: ಗಂಗಾವತಿ ಹೊರವಲಯದಲ್ಲಿ 4 ವರ್ಷದ ಚಿರತೆ ಸೆರೆ- ಜನತೆ ನಿರಾಳ!

0
Spread the love

ಕೊಪ್ಪಳ:- ಜಿಲ್ಲೆಯ ಗಂಗಾವತಿ ಹೊರವಲಯದಲ್ಲಿ ಕಳೆದ ಒಂದು ವಾರದಿಂದ ಕಾಣಿಸಿಕೊಳ್ಳುತ್ತಿದ್ದ 4 ವರ್ಷದ ಚಿರತೆ ಕೊನೆಗೂ ಅರಣ್ಯ ಅಧಿಕಾರಿಗಳು ಇರಿಸಿದ್ದ ಬೋನಿಗೆ ಬಿದ್ದಿದೆ.

Advertisement

ಗಂಗಾವತಿ ಹೊರವಲಯದ ಜಯನಗರದಲ್ಲಿ ಕಳೆದ ಒಂದು ವಾರದಿಂದ 4 ವರ್ಷದ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಇದರಿಂದಾಗಿ ಅಲ್ಲಿನ ಜನ ಭಯಭೀತರಾಗಿದ್ದರು. ಹೀಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಸೆರೆಹಿಡಿಯುವಲ್ಲಿ ಕಾರ್ಯನಿರತರಾಗಿದ್ದರು. ಗಂಗಾವತಿ ವಲಯ ಅರಣ್ಯಾಧಿಕಾರಿ ಸುಭಾಸ್ ಚಂದ್ರ ನೇತೃತ್ವದಲ್ಲಿ ಇಂದು ಚಿರತೆಯನ್ನು ಸೆರೆಹಿಡಿಯಲಾಗಿದೆ.

ಬೋನಿಗೆ ಬಿದ್ದ ಚಿರತೆಯ ವೈದ್ಯಕೀಯ ತಪಾಸಣೆ ನಡೆಸಿ, ಬಳಿಕ ಅದನ್ನು ಕಾಡಿಗೆ ಅಥವಾ ಪ್ರಾಣಿಸಂಗ್ರಹಾಲಯಕ್ಕೆ ರವಾನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here