ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಕೆಂಚಲಾಪುರ ಓಣಿಯ ಕೊಟ್ಟೂರ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ನಿಮಿತ್ತ ಡಿ.9ರ ಸಂಜೆ 6ಕ್ಕೆ ಕಾರ್ತಿಕ ದೀಪೋತ್ಸವ ಜರುಗಲಿದೆ.
Advertisement
ಪ್ರತಿವರ್ಷದ ಸಂಪ್ರದಾಯದಂತೆ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ನಡೆಯುವಂತೆ ಕೊಬ್ಬರಿ ಸುಡುವ ಮೂಲಕ ದೀಪೋತ್ಸವ, ವಿಶೇಷ ಪೂಜೆ, ಪ್ರಸಾದ ಕಾರ್ಯಕ್ರಮಗಳನ್ನು ವಿಜೃಂಭಣೆ ಮತ್ತು ಶೃದ್ಧಾ ಭಕ್ತಿಯಿಂದ ನೆರವೇರಿಸಲಾಗುವುದು ಎಂದು ಭಕ್ತ ಮಂಡಳಿಯ ರಾಜು ಬುರಡಿ ತಿಳಿಸಿದ್ದಾರೆ.