ಬೆಂಗಳೂರು:- ಕೆಆರ್ ಪುರ ವಲಯದಲ್ಲಿ ಜಿಬಿಎ ಅಧಿಕಾರಿಗಳು ಪ್ರಾಪರ್ಟಿ ಟ್ಯಾಕ್ಸ್ ಬಾಕಿ ಇರುವ ಕಟ್ಟಡ ಮಾಲೀಕರಿಗೆ ದಂಡ ಮತ್ತು ಹರಾಜು ಕ್ರಮ ಜಾರಿಗೊಳಿಸಿದ್ದಾರೆ.
ವಲಯ ಆಯುಕ್ತೆ ಡಾ. ಸುಧಾ ಸ್ವಪ್ನ್ ನೇತೃತ್ವದಲ್ಲಿ ನಡೆದ ಭರ್ಜರಿ ಕಾರ್ಯಾಚರಣೆಯಲ್ಲಿ, ಎರಡು–ಮೂರು ವರ್ಷಗಳಿಂದ ವಾಣಿಜ್ಯ ಮಳಿಗೆಗಳು ಮತ್ತು ಕಟ್ಟಡಗಳಿಗೆ ಪಾವತಿ ಮಾಡದವುಗಳಿಗೆ ಸೀಲ್ ಹಾಕಿ, ಹರಾಜು ನೋಟೀಸ್ ಅಂಟಿಸಲಾಗಿದೆ.
ಕೆಆರ್ ಪುರ ವಲಯ ವ್ಯಾಪ್ತಿಯಲ್ಲಿ ಒಟ್ಟು 24 ಕಟ್ಟಡಗಳನ್ನು ಹರಾಜಿಗೆ ಗುರುತಿಸಲಾಗಿದೆ. ಅಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕಟ್ಟಡ ಮಾಲೀಕರ ವಿರುದ್ದ ಕ್ರಮ ಕೈಗೊಂಡಿದ್ದಾರೆ.



