ಬೆಂಗಳೂರು: ಕೆಆರ್ ಪುರ ಜಿಬಿಎ ವಲಯದಲ್ಲಿ ಅಕ್ರಮ ಫ್ಲೆಕ್ಸ್ ಬ್ಯಾನರ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಿ ₹50,000 ದಂಡ ವಸೂಲಿ ಮಾಡಲಾಗಿದೆ.
ರಾತ್ರಿಯ ಸಮಯದಲ್ಲಿ ಜಂಟಿ ಆಯುಕ್ತೆ ಡಾ. ಸುಧಾ ನೇತೃತ್ವದಲ್ಲಿ 60 ಸಿಬ್ಬಂದಿಗಳೊಂದಿಗೆ ಫೀಲ್ಡ್ ಗೆ ಇಳಿದ ಜಿಬಿಎ ಅಧಿಕಾರಿಗಳು ಪಾದಚಾರಿ ಮಾರ್ಗಗಳಲ್ಲಿ ಅಕ್ರಮವಾಗಿ ನೆರೆದಿದ್ದ ಬ್ಯಾನರ್‌ಗಳು ಮತ್ತು ನೇಮ್ ಬೋರ್ಡ್‌ಗಳನ್ನು ತೆರವುಗೊಳಿಸಿದ್ದಾರೆ. ಕೆಆರ್ ಪುರ ಸಿಟಿ, ಜಿಬಿಎ ಕಛೇರಿ ಮುಂಭಾಗ, ಶ್ರೀವಿನಾಯಕ ಜ್ಯೂವೆಲ್ಲರಿ, ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್, ಜಿಆರ್ ಟಿ ಜ್ಯೂವೆಲ್ಲರಿ ಮತ್ತು ಬಾಲಾಜಿ ವೈನ್ಸ್ ಸೇರಿದಂತೆ ಅನೇಕ ವ್ಯವಹಾರಸ್ಥರ ಬ್ಯಾನರ್‌ಗಳಿಗೆ ದಂಡ ವಿಧಿಸಲಾಗಿದೆ.
ಫ್ಲೆಕ್ಸ್ ಬ್ಯಾನರ್‌ಗಳಿಗೆ ಅಳವಡಿಸಿದ ಎಲ್ಇಡಿ ಲೈಟ್‌ಗಳಿಗೆ ಕೂಡ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ಜಿಬಿಎ ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿಯಲಿದೆ ಮತ್ತು ವಲಯ ವ್ಯಾಪ್ತಿಯಲ್ಲಿನ ಎಲ್ಲಾ ಅನಧಿಕೃತ ಬ್ಯಾನರ್, ಫ್ಲೆಕ್ಸ್ ಮತ್ತು ನೇಮ್ ಬೋರ್ಡ್‌ಗಳಿಗೆ ನಿರಂತರ ಪರಿಶೀಲನೆ ಜಾರಿಯಲ್ಲಿದೆ.



