ಬೆಂಗಳೂರು:- ಕೆಆರ್ ಪುರದಲ್ಲಿ ಎರಡನೇ ಹಂತದ ನೇಮ್ ಬೋರ್ಡಿಂಗ್ ಮತ್ತು ಫ್ಲೆಕ್ಸ್ ಬ್ಯಾನರ್ ತೆರವು ಕಾರ್ಯಾಚರಣೆ ಜಿಬಿಎ ವಲಯದ ಜಂಟಿ ಆಯುಕ್ತೆ ಡಾ. ಸುಧಾ ನೇತೃತ್ವದಲ್ಲಿ ಜರುಗಿದೆ.
50ಕ್ಕೂ ಹೆಚ್ಚು ಸಿಬ್ಬಂದಿಗಳೊಂದಿಗೆ ರಾತ್ರಿ ವೇಳೆ ಕೆಆರ್ ಪುರ ಜಂಕ್ಷನ್ ನಿಂದ ಮೇಡಹಳ್ಳಿ ವರೆಗೆ ಕಾರ್ಯಾಚರಣೆ ನಡೆಸಿ, ಪಾದಚಾರಿ ಮಾರ್ಗದಲ್ಲಿ ಅನಧಿಕೃತ ಬ್ಯಾನರ್ಗಳು, ನೇಮ್ ಬೋರ್ಡಿಂಗ್ಗಳು ತೆರವು ಮಾಡಲಾಗಿದೆ.
ಫ್ಲೆಕ್ಸ್ ಬ್ಯಾನರ್ಗಳಿಗೆ ಎಲ್ಇಡಿ ಲೈಟ್ ಅಳಿಸಿದ್ದವರಿಗೆ ದಂಡ ವಿಧಿಸಲಾಗಿದೆ. ರಾಜಕಾರಣಿಗಳ ಬ್ಯಾನರ್ಗಳನ್ನೂ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಅಧಿಕಾರಿಗಳು ಅನಧಿಕೃತ ನೇಮ್ ಬೋರ್ಡಿಂಗ್ಗಳಿಂದ ಪಾದಚಾರಿಗಳ ಸುರಕ್ಷತೆ ಮತ್ತು ಸಾರ್ವಜನಿಕ ಸಾಗಣೆ ಸುಗಮವಾಗಲು ಕ್ರಮ ಕೈಗೊಂಡಿದ್ದಾರೆ.



