ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕೃಷ್ಣಗೌಡ ಎಚ್.ಪಾಟೀಲ್ ಆಯ್ಕೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ರಾಷ್ಟ್ರೀಯ ಯುವ ಕಾಂಗ್ರೆಸ್ ವತಿಯಿಂದ ನಡೆದ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಕಮಿಟಿಯ ಚುನಾವಣೆಯಲ್ಲಿ ಗದಗ ಜಿಲ್ಲೆಯಿಂದ ಜಿದ್ದಾ-ಜಿದ್ದಿನ ಪೈಪೋಟಿ ನಡೆಯಿತು. ಕೃಷ್ಣಗೌಡ ಎಚ್.ಪಾಟೀಲ್ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಅಕ್ಷಯ ಪಾಟೀಲ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಉದಯ ವೀರನಗೌಡ್ರ ರಾಜ್ಯ ಕಾರ್ಯದರ್ಶಿಯಾಗಿ ಚುನಾಯಿತರಾಗಿದ್ದಾರೆ.

Advertisement

ಭರತರಡ್ಡಿ ಭೀಮರಡ್ಡಿಯವರ ಜಿಲ್ಲಾ ಉಪಾಧ್ಯಕ್ಷ, ಎಸ್.ಬಿ. ಗವಾರಿ ಜಿಲ್ಲಾ OBC ಉಪಾಧ್ಯಕ್ಷರಾಗಿ, ರಾಘವೇಂದ್ರ ದೊಡ್ಡಮನಿ ಜಿಲ್ಲಾ SC ಉಪಾಧ್ಯಕ್ಷರಾಗಿ, ರವಿ ಮೆಟಗುಡ್ OBC ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಬಸವರಾಜ ಪಾಟೀಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಎಚ್.ವಿ. ರಿತ್ತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಮಿಲಿಂದ ಕಾಳೆ ಪ್ರಧಾನ ಕಾರ್ಯದರ್ಶಿಯಾಗಿ, ವಿಜಯಕುಮಾರ ಚಲವಾದಿ SC ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ನರಗುಂದ ಅಸೆಂಬ್ಲಿಯಲ್ಲಿ ಈರಪ್ಪ ಚುಳಕಿ ತಾಲೂಕಾಧ್ಯಕ್ಷರಾಗಿ, ವಿನಾಯಕ ಎಸ್.ಗುಲಗಂಜಿ ಉಪಾಧ್ಯಕ್ಷರಾಗಿ, ನಾಗರಾಜ ಪೂಜಾರ ಉಪಾಧ್ಯಕ್ಷರಾಗಿ, ಅಶೋಕ ಎಚ್.ತಾಳದ ಉಪಾಧ್ಯಕ್ಷರಾಗಿ, ಪ್ರವೀಣ ಮಾಡಳ್ಳಿ ಪ್ರಧಾನ ಕಾರ್ಯದರ್ಶಿಗಳಾಗಿ ಚುನಾಯಿತರಾಗಿದ್ದಾರೆ.

ನರಗುಂದ ಬ್ಲಾಕ್‌ನಲ್ಲಿ ಸುನೀಲ್ ಕಳಸನ್ನವರ ಬ್ಲಾಕ್ ಅಧ್ಯಕ್ಷರು, ನಾಗರಾಜ ಹೂಲಿ ನರಗುಂದ ಬ್ಲಾಕ್ ಉಪಾಧ್ಯಕ್ಷರು, ರಿಯಾಜಹಮ್ಮದ್ ಚಿಕ್ಕೋಡಿ ನರಗುಂದ ಬ್ಲಾಕ್ ಉಪಾಧ್ಯಕ್ಷರು, ಹನುಮಂತ ರಾಮಣ್ಣವರ ನರಗುಂದ ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತರಾಗಿದ್ದಾರೆ.

ಹೊಳೆ ಆಲೂರ ಬ್ಲಾಕ್‌ನಲ್ಲಿ ಶಿವಪ್ಪ (ನಿಂಗಪ್ಪ) ಗುಂಜಾಳ ಅಧ್ಯಕ್ಷರು, ವಿಕ್ರಮ ಬರಡ್ಡಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಯುಥ್ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ವಿವೇಕ ಯಾವಗಲ್ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here