ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ವಿಜಯ ಪ್ರಾಥಮಿಕ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿಜಯ ಫೈನ್ ಆರ್ಟ್ ಸೊಸೈಟಿಯ ಕಾರ್ಯದರ್ಶಿ ಸಂತೋಷ ಅಕ್ಕಿ ಮಾತನಾಡಿ, ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸುತ್ತಾರೆ. ಶ್ರೀಕೃಷ್ಣ ಜನ್ಮದಿನವನ್ನು ಚಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ. ಕೃಷ್ಣ ಹೇಳಿದ ಭಗವದ್ಗೀತೆಯಲ್ಲಿಯ ಶ್ಲೋಕಗಳು ಜೀವನ ಸಾರವನ್ನು ಹೇಳುತ್ತದೆ.
ಅಸಂಖ್ಯಾತ ಸಾಧಕರಿಗೆ ಸ್ಪೂರ್ತಿದಾಯಕವಾದ ಕೃಷ್ಣನ ಸಂದೇಶವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನವು ಸಾರ್ಥಕವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಅಶೋಕ ಅಕ್ಕಿ, ಮುಖ್ಯ ಅಥಿತಿಗಳಾದ ಬಿ.ಎಫ್. ಚೇಗರೆಡ್ಡಿ, ಸಾಗರಿಕಾ ಅಕ್ಕಿ, ಪಿಯು ಕಾಲೇಜಿನ ಪ್ರಾಚಾರ್ಯರಾದ ಶ್ರೀದೇವಿ ವಿ.ವಾಯ್, ಮುಖ್ಯೋಪಾಧ್ಯಾಯರಾದ ರೇಷ್ಮಾ ಗಾಣಿಗೇರ, ರೇಖಾ ಮಳೇಕರ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.