ಗದಗ: ಸಂಭಾಪೂರ ರಸ್ತೆಯಲ್ಲಿನ ಪೊಲೀಸ್ ವಸತಿ ಗೃಹದ ಬಳಿ ಇರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕ್ರಶ್ ಕೇಂದ್ರದಲ್ಲಿ ಕೃಷ್ಣ ಜಯಂತಿ ಆಚರಿಸಲಾಯಿತು. ಕೇಂದ್ರದ ಪುಟಾಣಿ ವಿದ್ಯಾರ್ಥಿಗಳು ವಿಧವಿಧವಾದ ಕೃಷ್ಣ ರಾಧೆಯರ ವೇಷದಲ್ಲಿ ಭಾಗಿಯಾಗಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಿರಿಯ ಸೂಪರ್‌ವೈಸರ್ ಹಾಗೂ ಕೇಂದ್ರದ ಶಿಕ್ಷಕರಾದ ಚಂದ್ರಕಲಾ ಇಟಗಿಮಠ, ಸಿಬ್ಬಂದಿಗಳಾದ ನೇತ್ರಾ ಮಹೇಂದ್ರಕರ್, ಪರವಿನಭಾನು ಹಾಗೂ ಪಾಲಕರು ಉಪಸ್ಥಿತರಿದ್ದರು.
Advertisement