ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಬಿಂಕದಕಟ್ಟಿಯ ಶ್ರೀರಾಮಕರುಣಾನಂದ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಧಾನ ಗುರುಗಳಾದ ರಾಘವೇಂದ್ರ ಕೆ.ಆರ್. ವಹಿಸಿದ್ದರು. ಶೈಲ ಬೆರಗೇರಿ ಭಗವಾನ್ ಶ್ರೀಕೃಷ್ಣನ ಹುಟ್ಟು ಮತ್ತು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನ ಪಾತ್ರದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಕುರಿತಾಗಿ ಶಾಲೆಯ ಪ್ರಧಾನ ಗುರುಗಳು ಮಾತನಾಡಿದರು. ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ತೊಟ್ಟಿಲು ಶಾಸ್ತçವನ್ನು ನೆರವೇರಿಸಲಾಯಿತು.
ಶಾಲೆಯ ಎಲ್‌ಕೆಜಿ, ಯುಕೆಜಿ, ಒಂದನೇ ತರಗತಿ ಹಾಗೂ ಎರಡನೇ ತರಗತಿಯ ಮಕ್ಕಳು ಶ್ರೀಕೃಷ್ಣ ಮತ್ತು ರಾಧೆಯ ವೇಷಭೂಷಣಗಳೊಂದಿಗೆ ಆಕರ್ಷಿಸಿ ಕಾರ್ಯಕ್ರಮಕ್ಕೆ ಮೆರಗನ್ನು ನೀಡಿದರು. ವಿಜಯಲಕ್ಷ್ಮಿ ಹಿರೇಮಠ ಸ್ವಾಗತಿಸಿದರು. ಶಿಕ್ಷಕಿ ಗೀತಾ ಕರಿಬಿಷ್ಟಿ ಕಾರ್ಯಕ್ರಮ ನಿರೂಪಿಸಿದರು. ಶ್ರುತಿ ಬ್ಯಾಹಟ್ಟಿ ವಂದಿಸಿದರು.