ಹಾವೇರಿ: ಇಂದು ಹಾವೇರಿ ಜಿಲ್ಲಾ ಪ್ರವಾಸದಲ್ಲಿರುವ ಸಚಿವ ಕೃಷ್ಣಭೈರೆಗೌಡ ಯಾವ ಸೂಚನೆ ನೀಡದೆ ರಾಣೆಬೆನ್ನೂರು ತಹಸೀಲ್ದಾರ ಕಚೇರಿಗೆ ದಿಢೀರ್ ಭೇಟಿ ನೀಡಿದ್ದಾರೆ.
Advertisement
ಕಂದಾಯ ಇಲಾಖೆಯಲ್ಲಿ ಡಿಜಿಟಲೀಕರಣ ಮಾಡುತ್ತಿರುವುದರ ಬಗ್ಗೆ ಮಾಹಿತಿ ಪಡೆದ ಸಚಿವರು, ಅಧಿಕಾರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಜನರಿಗೆ ಬೇಗ ಕೆಲಸ ಮಾಡಿಕೊಡಲು ಡಿಜಿಟಲೀಕರಣ ಮಾಡಲಾಗಿದೆ.
ಆದ್ರೆ ಇದರ ಉಪಯೋಗ ಪಡೆಯದೆ ಅಧಿಕಾರಿಗಳು ಮಷೀನ ಮೂಲೆಗಿಟ್ಟಿದ್ದರು. ನಿವೇಲ್ಲಾ ಡಿಜಿಟಲೀಕರಣ ಕಾರ್ಯರೂಪಕ್ಕೆ ತರಬೇಕು. ಡಿಜಿಟಲೀಕರಣ ಮಾಡುವುದರ ಸಾಧಕ ಭಾದಕಗಳ ಬಗ್ಗೆ ಮಾಹಿತಿ ಪಡೆದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಹಾವೇರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಸಾಥ್ ನೀಡಿದರು.