ಕೇಂದ್ರ ಬಿಜೆಪಿ ನಾಯಕರ ವಿರುದ್ಧ ಕೆ ಎಸ್ ಈಶ್ವರಪ್ಪ ಅಸಮಾಧಾನ!

0
Spread the love

ಬಾಗಲಕೋಟೆ:- ಕೇಂದ್ರ ಬಿಜೆಪಿ ನಾಯಕರ ವಿರುದ್ಧ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅಸಮಾಧಾನ ಹೊರ ಹಾಕಿದ್ದಾರೆ.

Advertisement

ಇಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಲೇ ಮೊದಲಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ಬೇಸರ ಹೊರ ಹಾಕಿದ್ದಾರೆ. ಕಳೆದ ಬಾರಿ ರಾಯಣ್ಣ ಬ್ರಿಗೇಡ್‌ಗೆ ಹಿಂದುಳಿದವರು, ದಲಿತರು ಹಾಗೂ ಸಮಸ್ತ ಹಿಂದೂ ಸಮಾಜ ಬೆಂಬಲ ಕೊಟ್ಟಿತ್ತು. ಅಲ್ಲದೇ ಎಲ್ಲಾ ಪಕ್ಷದವರು ಆ ಕಾರ್ಯಕ್ರಮಕ್ಕೆ ಬಂದಿದ್ದರು.

ಆದರೆ ಇದನ್ನು ಸಹಿಸದ ಕೆಲವರು ಅಮಿತ್ ಶಾ ಅವರನ್ನು ಭೇಟಿಯಾಗಿ ನನ್ನ ಬಗ್ಗೆ ಹಾಗೂ ಈ ಕಾರ್ಯಕ್ರಮದ ಬಗ್ಗೆ ದೂರು ನೀಡಿದ್ದರು ಎಂದು ತಿಳಿಸಿದರು.

ಆಗ ಕೇಂದ್ರ ನಾಯಕರಾದ ಅಮಿತ್ ಶಾ ನನ್ನನ್ನು ಕರೆದು ರಾಯಣ್ಣ ಬ್ರಿಗೇಡ್ ಯಾಕೆ ಬೇಕು? ಇದೆಲ್ಲ ಬೇಡ ಅಂತ ನನಗೆ ಹೇಳಿದ್ರ. ಆದ್ರೆ ನಾನು ಯಾಕೆ ಬೇಡ ಅಂತ ಅವರ ಜೊತೆ ವಾದ ಮಾಡಿದೆ. ಆದರೆ ಅವರ ಬಳಿ ಇದಕ್ಕೆ ಉತ್ತರ ಸಿಗಲಿಲ್ಲ ಎಂದು ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.

ಹಿರಿಯರ ಮಾತನ್ನು ಕೇಳಬೇಕು ಎಂಬುದು ನನಗೆ ಮುಂಚೆಯಿಂದ ಬಂದ ಸ್ವಭಾವ. ಆದರೆ ಈಗ ಅವರ ಮಾತನ್ನು ನಾನು ಕೇಳಿದ್ದೇ ತಪ್ಪಾಯ್ತಾ ಅಂತ ಅನಿಸುತ್ತಿದೆ ಎಂದು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here