ರಾಯಚೂರು:- ರಾಯಚೂರಿನ ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ಮಕ್ಕಳ ಮೇಲೆ ಕೆಕೆಆರ್‌ಟಿಸಿ ಬಸ್ ಹರಿದ ಪರಿಣಾಮ ಓರ್ವ ಬಾಲಕ ಸಾವನ್ನಪ್ಪಿರುವ ಘಟನೆ ಜರುಗಿದೆ.
Advertisement
ಘಟನೆಯಲ್ಲಿ ಇನ್ನೋರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಮೃತ ಬಾಲಕನನ್ನು 12 ವರ್ಷದ ಸಿದ್ದರಾಮ ಎಂದು ಗುರುತಿಸಲಾಗಿದೆ. 8 ವರ್ಷದ ಧನಂಜಯ ಗಂಭೀರ ಗಾಯಗೊಂಡ ಬಾಲಕ. ಸಿದ್ದರಾಮ ಹಾಗೂ ಧನಂಜಯ ಇಬ್ಬರೂ ಅಣ್ಣತಮ್ಮಂದಿರು. ಘಟನೆ ನಡೆದ ಕೂಡಲೇ ಸ್ಥಳೀಯರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಸಿದ್ದರಾಮ ಮೃತಪಟ್ಟಿದ್ದಾನೆ.
ಇನ್ನು ಘಟನೆಯಲ್ಲಿ ಧನಂಜಯನ ಎರಡೂ ಕೈಗಳು ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


