ವಿಜಯಸಾಕ್ಷಿ ಸುದ್ದಿ, ಗದಗ : ಶಿಗ್ಗಾವ್ ಮತಕ್ಷೇತ್ರದ ಸದಸ್ಯತ್ವ ಅಭಿಯಾನ ಹಾಗೂ ಉಪಚುನಾವಣೆ ಸಂಬಂಧಿಸಿದ ಚರ್ಚಾ ಕಾರ್ಯಕ್ರಮಕ್ಕೆ ಆಗಮಿಸಿದ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ ಕುಮಾರಸ್ವಾಮಿ ಅವರನ್ನು ಗದಗ ಜಿಲ್ಲಾಧ್ಯಕ್ಷ ಎಂ.ವೈ. ಮುಧೋಳ ನೇತೃತ್ವದಲ್ಲಿ ಸನ್ಮಾನಿಸಿ ಗದಗ ಜಿಲ್ಲೆಗೆ ಆಗಮಿಸುವಂತೆ ಅಹ್ವಾನ ನೀಡಲಾಯಿತು.
Advertisement
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿಅಲಿ ಎಚ್.ಕೊಪ್ಪಳ, ರಾಜ್ಯ ವಕ್ತಾರರಾದ ವಿ.ಆರ್. ಗೋವಿಂದಗೌಡ್ರ, ಜಿಲ್ಲಾ ಹಿಂದುಳಿದ ಘಟಕದ ಅಧ್ಯಕ್ಷ ತಿಪ್ಪಣ್ಣ ಪುಡೆದ, ಗಜೇಂದ್ರಗಡ ತಾಲೂಕಾಧ್ಯಕ್ಷ ಸಂಗಪ್ಪ ಎಲ್ಗುಣಶಿ, ಶಿರಹಟ್ಟಿ ತಾಲೂಕಾಧ್ಯಕ್ಷ ಸಿದ್ದಣ್ಣ ಹೊಂಬಾಳಿಮಠ, ಪದಾಧಿಕಾರಿಗಳಾದ ಜಯರಾಜ ವಾಲಿ, ಅಭಿಷೇಕ, ಪ್ರಫುಲ್ ಪುಣೆಕರ್, ಎಂ.ಎಸ್. ಪರ್ವತಗೌಡ, ಜಿ.ಕೆ. ಕೊಳ್ಳಿಮಠ ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು ಇದ್ದರು.


