ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯಾಲಯದಲ್ಲಿ ಕಳೆದ 8 ವರ್ಷಗಳಿಂದ ಲೆಕ್ಕ ಅಧೀಕ್ಷಕರಾಗಿ ಸೇವೆ ಸಲ್ಲಿಸಿರುವ ಶಾಂತಮ್ಮ ಹೆಗರಡ್ಡಿ ಅವರು ಗದಗ ಜಿಲ್ಲಾ ನೋಂದಣಾಧಿಕಾರಿಗಳ ಕಾರ್ಯಾಲಯಕ್ಕೆ ಮುಂಬಡ್ತಿಯಾಗಿ ಲೆಕ್ಕ ಪರಿಶೋಧನಾ ಅಧಿಕಾರಿಯಾಗಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ರವಿ ಎಲ್.ಗುಂಜೀಕರ ಸನ್ಮಾನಿಸಿ, ಗೌರವಿಸಿ, ಬಿಳ್ಕೊಟ್ಟರು.
Advertisement
ಈ ಸಂದರ್ಭದಲ್ಲಿ ಓಬಿಸಿ ತಾಲೂಕು ಅಧಿಕಾರಿ ಡಾ. ಬಸವರಾಜ ಬಳ್ಳಾರಿ, ಸುರಕೋಡ, ಕುಲಕರ್ಣಿ, ಕಲ್ಮಠ, ಮಲ್ಲಿಕಾರ್ಜುನ ಹನಸಿ ಸೇರಿದಂತೆ ಹಲವರಿದ್ದರು.