ವಿಜಯಸಾಕ್ಷಿ ಸುದ್ದಿ, ಗದಗ : ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯ ಕಾರ್ಮಿಕ ಘಟಕದ ರಾಜ್ಯಾದ್ಯಕ್ಷ, ಗಣ್ಯ ಉದ್ದಿಮೆದಾರರು ಹಾಗೂ ಸಾಮಾಜಿಕ ಕಾರ್ಯಕರ್ತ ಶಿವಾನಂದ ಹಿರೇಮಠ ಅವರ ನಾಡು-ನುಡಿ, ಸಂಸ್ಕೃತಿ ಪರವಾಗಿ ನಡೆಸಿರುವ ಹೋರಾಟ ಹಾಗೂ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿರುವ ತಮಿಳುನಾಡಿನ ಏಶಿಯಾ ಇಂಟರ್‌ನ್ಯಾಶನಲ್ ಕಲ್ಚರ್ ಅಕಾಡೆಮಿ ಇತ್ತೀಚೆಗೆ ಗೌರವ ಡಾಕ್ಟರೇಟ್‌ಟ್ನೀಡಿ ಗೌರವಿಸಿದ ಹಿನ್ನೆಲೆಯಲ್ಲಿ ಶ್ರೀ ಮಹಾಲಕ್ಷ್ಮಿ ಖಾರಾ ಇಂಡಸ್ಟ್ರೀಸ್ ಕಾರ್ಮಿಕರು ಹಿರೇಮಠ ದಂಪತಿಗಳನ್ನು ಸನ್ಮಾನಿಸಿ, ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಡಾ. ಶಿವಾನಂದಯ್ಯ ಹಿರೇಮಠ ಮಾತನಾಡಿ, ವಿಶ್ವಗುರು ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಮಾತಿನಲ್ಲಿ ನಂಬಿಕೆಯನ್ನು ಇಟ್ಟು ಶ್ರೀ ಮಹಾಲಕ್ಷ್ಮಿ ಖಾರಾ ಇಂಡಸ್ಟ್ರೀಸ್ ಹುಟ್ಟು ಹಾಕಿ, ಈ ಮೂಲಕ 15 ಕಾರ್ಮಿಕರಿಗೆ ಉದ್ಯೋಗ ನೀಡಿದ್ದೇನೆ. ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷನಾಗಿ ಕಾರ್ಮಿಕರ ಹಿತವನ್ನು ಬಯಸುತ್ತಿರುವ ನನಗೆ ಕಾರ್ಮಿಕ ದಿನಾಚರಣೆಯಂದೇ ನನ್ನ ಕಾರ್ಮಿಕರು ನನಗೆ ಸನ್ಮಾನಿಸಿ, ಗೌರವಿಸುವ ಮೂಲಕ ನನ್ನ ಮೇಲೆ ತಮ್ಮ ಅಭಿಮಾನ ವ್ಯಕ್ತಪಡಿಸಿರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ವೀರೇಶ, ಮೃತ್ಯುಂಜಯ, ಅಬಿಷೇಕ, ಅಶ್ವಿನಿ, ಕಾರ್ಮಿಕ ಬಂಧುಗಳಾದ ವೀರಯ್ಯ, ಲಕ್ಷ್ಮಣ, ಪರಮೇಶಿ, ಕುಶಾಲ, ಕಲ್ಲಪ್ಪ, ಮಂಜು, ದರ್ಶನ, ಅಂಬರೀಶ, ಅಕ್ಕಮ್ಮ, ರೇಣುಕಾ, ನೇತ್ರಾ, ಕುಸುಮಾ ಸೇರಿದಂತೆ ಹಲವರಿದ್ದರು.