ಬೆಂಗಳೂರು:- ಸಿದ್ದರಾಮಯ್ಯ ಬಗ್ಗೆ ಮಾತಾಡೋ ಯೋಗ್ಯತೆ ಕುಮಾರಸ್ವಾಮಿಗಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕೇಂದ್ರ ಸಚಿವರಾದ ಹೆಚ್ಡಿ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಲ್ಲಿ ಸಂಸದರಾಗಿ ಆಯ್ಕೆಯಾದವರು. ಅವರ ಟೀಕೆ- ಟಿಪ್ಪಣೆಗಳನ್ನು ನೋಡುತ್ತಾ ಇರುತ್ತೀರಿ. ಒಬ್ಬ ಮಾಜಿ ಸಿಎಂ ಹೇಗೆ ಮಾತಾಡಬೇಕು ಎಂಬುದು ಅವರಿಗೆ ಗೊತ್ತಿಲ್ಲ.
ಸಿದ್ದರಾಮಯ್ಯನವರ ಚರಿತ್ರೆ, ನಾಯಕತ್ವ, ಆಡಳಿತವನ್ನು ಪ್ರಶ್ನೆ ಮಾಡುವ ಅರ್ಹತೆ ಕುಮಾರಸ್ವಾಮಿಯವರಿಗೆ ಇಲ್ಲ. ಗ್ರಾಮಗಳಲ್ಲೂ ನೂರಕ್ಕೆ ನೂರರಷ್ಟು 5 ಗ್ಯಾರಂಟಿ ನೀಡಲಾಗುತ್ತಿದೆ. ಅಲ್ಲಿ ಮುಸ್ಲಿಮರು, ಒಕ್ಕಲಿಗರು, ಬೇರೆ ಪಂಗಡದವರೂ ಅಂತ ಕೊಡುತ್ತಾ ಇದ್ದಾರಾ? ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಆದರೆ ಪಕ್ಕದ ತಟ್ಟೆ ನೋಡ್ತಾರೆ. ಇದೆಲ್ಲಾ ಮಾತಾಡೋದಕ್ಕೆ ಅವಕಾಶ ಮಾಡಿ ಕೊಟ್ಟಿದ್ದೇ ನೀವು.
ಅದಕ್ಕೆ ಅವರು ಬಂದು ಮಾತಾಡ್ತಾ ಇದ್ದಾರೆ ಎಂದು ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.
ಸಿದ್ದರಾಮಯ್ಯ ಬೇರೆ ಜಿಲ್ಲೆಗೆ ಗಮನ ಹರಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಮಂಡ್ಯ ಜಿಲ್ಲೆಯ ಪ್ರತಿ ಕಾರ್ಯಕ್ರಮಕ್ಕೂ ಬರುತ್ತಾರೆ. ಮೊನ್ನೆ ನನ್ನನ್ನು ಅಮೆರಿಕಾಕ್ಕೆ ಕಳಿಸಿದ್ದರು. ಇಳುವರಿ ಬಗ್ಗೆ ಅಧ್ಯಯನ ಮಾಡೋದಕ್ಕೆ ನಾವು ಹೋಗಿದ್ದೆವು. ನೀವೆಲ್ಲಾ ನೀರು ಜಾಸ್ತಿ ಕೊಟ್ಟರೆ ಜಾಸ್ತಿ ಇಳುವರಿ ಬರುತ್ತೆ ಅಂತ ತಿಳಿದುಕೊಂಡಿದ್ದೀರಿ. ಆದರೆ ಆ ಥರ ಇಲ್ಲ. ಮಣ್ಣಿನ ಪರೀಕ್ಷೆ ಮಾಡಬೇಕು ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.