ಕುಮಾರಸ್ವಾಮಿಗೆ ಮುಸ್ಲಿಂ ಮತದಾರರ ಬಳಿ ಹೋಗಿ ವೋಟು ಕೇಳುವ ನೈತಿಕತೆ ಇಲ್ಲ: ಸಚಿವ ಜಮೀರ್

0
Spread the love

ಬಳ್ಳಾರಿ: ಕುಮಾರಸ್ವಾಮಿಗೆ ಮುಸ್ಲಿಂ ಮತದಾರರ ಬಳಿ ಹೋಗಿ ವೋಟು ಕೇಳುವ ನೈತಿಕತೆ ಇಲ್ಲ ಎಂದು ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಗೆ ಮುಸ್ಲಿಂ ಮತದಾರರ ಬಳಿ ಹೋಗಿ ವೋಟು ಕೇಳುವ ನೈತಿಕತೆ ಇಲ್ಲ,

Advertisement

ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ತನಗೆ ಮುಸ್ಲಿಂ ವೋಟುಗಳೇ ಬೇಡ, ಅವರು ತನ್ನ ಪಕ್ಕದಲ್ಲಿ ಬಂದು ನಿಲ್ಲೋದು ಸಹ ಬೇಕಿಲ್ಲ ಎನ್ನುತ್ತಾರೆ, ಅವರ ಮಾತನ್ನು ಸಿಟಿ ರವಿ, ಬಿವೈ ವಿಜಯೇಂದ್ರ ಪುನರುಚ್ಛರಿಸುತ್ತಾರೆ, ನಮಗೆ ಮುಸ್ಲಿಂ ವೋಟುಗಳು ಬೇಕೆಂದು ಕುಮಾರಸ್ವಾಮಿ ಬಿಜೆಪಿ ನಾಯಕರಿಂದ ಹೇಳಿಸಲಿ ನೋಡೋಣ ಎಂದು ಸವಾಲೆಸೆದರು. ಇನ್ನೂ ನಿಖಿಲ್ ಕುಮಾರಸ್ವಾಮಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಮೀರ್, ಅವರ ಬಗ್ಗೆ ಕಾಮೆಂಟ್ ಮಾಡಲ್ಲ, ತನ್ನ ಮಗ ಮತ್ತು ನಿಖಿಲ್ ಇಬ್ಬರೂ ತನಗೆ ಒಂದೇ, ಅವರು ಈಗಲೂ ತನ್ನನ್ನು ಅಂಕಲ್ ಎಂದು ಕರೆಯುತ್ತಾರೆ ಎಂದರು.

 


Spread the love

LEAVE A REPLY

Please enter your comment!
Please enter your name here