HomeKarnataka Newsವಿರೋಧ ಪಕ್ಷದ ಜವಬ್ದಾರಿ ಕುಮಾರಸ್ವಾಮಿ ವಹಿಸಿಕೊಂಡಂತಿದೆ: ರಾಜ್ಯ ಬಿಜೆಪಿಗೆ ತಿವಿದ KN ರಾಜಣ್ಣ!

ವಿರೋಧ ಪಕ್ಷದ ಜವಬ್ದಾರಿ ಕುಮಾರಸ್ವಾಮಿ ವಹಿಸಿಕೊಂಡಂತಿದೆ: ರಾಜ್ಯ ಬಿಜೆಪಿಗೆ ತಿವಿದ KN ರಾಜಣ್ಣ!

For Dai;y Updates Join Our whatsapp Group

Spread the love

ಚಿತ್ರದುರ್ಗ:- ವಿರೋಧ ಪಕ್ಷದ ಜವಬ್ದಾರಿ ಕುಮಾರಸ್ವಾಮಿ ವಹಿಸಿಕೊಂಡಂತಿದೆ ಎಂದು ಹೇಳುವ ಮೂಲಕ ರಾಜ್ಯ ಬಿಜೆಪಿಗೆ ಮಾತಿನಲ್ಲೇ KN ರಾಜಣ್ಣ ತಿವಿದಿದ್ದಾರೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯರ ರಾಜೀನಾಮೆ ಕೇಳುತ್ತಿರುವ ವಿಪಕ್ಷ ನಾಯಕರಿಗೆ ಚಿತ್ರದುರ್ಗದಲ್ಲಿ ತಿರುಗೇಟು ಕೊಟ್ಟಿರುವ KN ರಾಜಣ್ಣ ಅವರು, BJP ನಾಯಕರಿಗೆ ಮಾಡೋದಕ್ಕೆ ಕೆಲಸ ಇಲ್ಲ. ಸತ್ಯ ಹೇಳಿದ್ರೆ ನಡೆಯುತ್ತೆ, ನೂರು ಬಾರಿ ಸುಳ್ಳು ಹೇಳಿದ್ರು ಸತ್ಯ ಮಾಡೋದಕ್ಕೆ ಹೊರಟಿದ್ದಾರೆ.

ಸಿದ್ದರಾಮಯ್ಯ ಅವರು ಏನೂ ಅಂತ ನಮಗೆ ಗೊತ್ತಿದೆ, ಅವರ ನಡವಳಿಕೆ ಗೊತ್ತಿದೆ. ಸುಳ್ಳು ಹೇಳೋರಿಗೆ ಏನೂ ಹೇಳೋದಕ್ಕೆ ಆಗಲ್ಲ, ತಪ್ಪು ಮಾಡಿದ್ರೆ ಒಪ್ಪಿಕೊಳ್ತೇವೆ. ಮನುಷ್ಯ ಅಂದಾಗ ತಪ್ಪು ಮಾಡ್ತಾರೆ, ಸುಳ್ಳಿಗೆ ಉತ್ತರ ಹೇಳೋದಕ್ಕೆ ಆಗಲ್ಲ. ಬಿಜೆಪಿಯವರು ವಿರೋಧ ಪಕ್ಷದ ಕೆಲಸ ಮಾಡಬೇಕಿತ್ತು.BJP ಅವರ ಬದಲು ಕುಮಾರ್ ಸ್ವಾಮಿ ಜವಾಬ್ದಾರಿ ವಹಿಸಿದ್ದಾರೆ, ಹಾಗಾಗಿ ಇವರಿಗೆ ಕೆಲಸ ಇಲ್ಲ.ಸುಳ್ಳು ಭಾಷಣ ಹೊಡೆದುಕೊಂಡು ತಿರುಗುತ್ತಿದ್ದಾರೆ, ಜನ ಇವರ ಮಾತಿಗೆ ಮೋಸ ಹೋಗಲ್ಲ.ಹಳ್ಳಿಯಲ್ಲಿನ ಬಡವರು ನೆಮ್ಮದಿಯಿಂದ ಊಟ ಮಾಡುವ ಪುಣ್ಯದ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ.

ಬಡತನದ ಬಗ್ಗೆ ಇರುವ ಯೋಚನಾ ಶಕ್ತಿ ಸಿದ್ದರಾಮಯ್ಯ ಅವರಿಗೆ ಇದೆ. ಬಡವರ ಆಶಿರ್ವಾದ ಸಿದ್ದರಾಮಯ್ಯ ಅವರ ಮೇಲಿದೆ, ಯಾರು ಏನೇ ಮಾಡ್ಲಿ. ಬಡವರ ಬೆಂಬಲ ಇರುವ ವರೆಗೂ ಯಾವುದಕ್ಕೂ ಹೆದರಲ್ಲ, ಜಗ್ಗಲ್ಲ. ಮುಡಾ ಕೇಸ್ ನಲ್ಲಿ ಸೈಟ್ ಕೊಟ್ಟವರು ಬಿಜೆಪಿಯವರೇ. ಸಿದ್ದರಾಮಯ್ಯ ಅರ್ಜಿ ಹಾಕಿದ್ರಾ!?ಅವರ ಪತ್ನಿ ಅವರು ಎಲ್ಲರು ಪಡೆದಂತೆ ಪಡೆದಿದ್ದಾರೆ. ಅದರಲ್ಲಿ ತಪ್ಪೇನು!? 15 ವರ್ಷದ ಹಿಂದಿನ ಕೇಸ್ ಹಿಡಿದುಕೊಂಡು ಮಾಡ್ತಿದ್ದಾರೆ.

ಬಿಜೆಪಿಯವರ ತಪ್ಪುಗಳು ಜನರಿಗೆ ಮನವರಿಕೆ ಮಾಡಲು ನಾವು ತಯಾರಿ ನಡೆಸಿದ್ದೇವೆ.ಅಸತ್ಯ ಹೇಳುವ ಜನರಿಗೆ ಸತ್ಯ ಹೇಳಿ ಮನವರಿಕೆ ಮಾಡಬೇಕು ಎಂದರು. ಇನ್ನೂ ಸಿದ್ದರಾಮಯ್ಯ ಚಾಮುಂಡೇಶ್ವರಿ ಮುಂದೆ ನಿಂತು ಸುಳ್ಳು ಹೇಳೋದಕ್ಕೆ ಆಗುತ್ತಾ. ಅದಕ್ಕೆ ಚಾಮುಂಡಿ ಸನ್ನಿದಿಯಲ್ಲಿ ಸಿದ್ದರಾಮಯ್ಯ ಸತ್ಯ ಮಾತ್ನಾಡಿದ್ದಾರೆ. ಇವರು ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡಿ ಇವರ ಆರೋಪಗಳ ಬಗ್ಗೆ ಮಾತಾಡಲಿ. ಅದೇ‌ ಸಿದ್ದರಾಮಯ್ಯ ದೇವರ ಮೇಲೆ ಪ್ರಮಾಣ ಮಾಡಿ ತಪ್ಪು ಮಾಡಿಲ್ಲ ಎಂದು ಹೇಳುತ್ತಾರೆ.

ಬಿಜೆಪಿ ನಾಯಕರು ಹೋಗಿ ಅವರ ತಪ್ಪುಗಳ ಬಗ್ಗೆ ಆಣೆ ಮಾಡಲಿ. ಸಿದ್ದರಾಮಯ್ಯ ತಪ್ಪು ಮಾಡಿದ್ರೆ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಇವರು ತಾಖತ್ ಇದ್ರೆ ಹೇಳಲಿ. ಸುಳ್ಳಿನ ಭಾಷಣ ಮಾಡುವುದು ಬಿಟ್ಟು, ಜನರನ್ನ ತಪ್ಪು ದಾರಿಗೆ ಎಳೆಯಬಾರ್ದು ಎಂದು ಟಾಂಗ್ ಕೊಟ್ಟಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!