ಕುಮಾರಸ್ವಾಮಿ ಹಣೆಬರಹ ಬರೆಯೋದು ಭಗವಂತ ಮತ್ತು ಏಳೂವರೆ ಕೋಟಿ ಜನತೆ: ನಿಖಿಲ್

0
Spread the love

ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಹೆಸರು ಬದಲಾವಣೆ ಮಾಡಿದರೆ ಅನೇಕ ತಾಂತ್ರಿಕ ಸಮಸ್ಯೆ ಆಗಲಿವೆ ಎಂದು ಜೆಡಿಎಸ್ ಯುವ ಘಟದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಹೆಸರು ಬದಲಾವಣೆ ಮಾಡಿದರೆ ಅನೇಕ ತಾಂತ್ರಿಕ ಸಮಸ್ಯೆ ಆಗಲಿವೆ.

Advertisement

ರೆವಿನ್ಯೂ ರೆಕಾರ್ಡ್, ಸರ್ಕಾರದ ದಾಖಲೆಗಳು 5 ತಾಲೂಕುಗಳಲ್ಲಿ ಬದಲಾವಣೆ ಆಗಬೇಕು.ಪ್ರತಿನಿತ್ಯ ಜನ ತಾಲೂಕು ಕಚೇರಿಗೆ ಓಡಾಬೇಕು. ಓಟರ್ ಐಡಿ, ಗ್ಯಾಸ್ ಬಿಲ್ ಅಡ್ರೆಸ್ ಇರಬಹುದು. ಇವೆಲ್ಲ ಸಮಸ್ಯೆಗಳಾಗುತ್ತವೆ. ಅಷ್ಟು ಸುಲಭವಾಗಿ ಹೆಸರು ಬದಲಾವಣೆ ಮಾಡೋದು ಸಾಧ್ಯವಿಲ್ಲ ಅಂತ ತಿಳಿಸಿದರು.

ಇನ್ನೂ ಬೆಂಗಳೂರು ದಕ್ಷಿಣ ಜಿಲ್ಲೆ ಹೆಸರು ಬದಲಾವಣೆ ಮಾಡಲು ಕುಮಾರಸ್ವಾಮಿ ಹಣೆಯಲ್ಲೂ ಬರೆದಿಲ್ಲ ಎಂಬ ಡಿಕೆ ಶಿವಕುಮಾರ್‌ಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಹಣೆಬರಹ ಬರೆಯೋದು ಭಗವಂತ ಮತ್ತು ಏಳೂವರೆ ಕೋಟಿ ಜನತೆ. ರಾಜ್ಯದ ಜನತೆ ಕುಮಾರಸ್ವಾಮಿ ಹಣೆಬರಹ ಬರೆಯುತ್ತಾರೆ. ಕಾದು ನೋಡೊಣ ಭಗವಂತ ಯಾರ್ ಯಾರ್ ಹಣೆಬರಹ ಏನು ಬರೆಯುತ್ತಾನೆ. ಈಗಾಗಲೇ ಏನೇನು ಬರೆದಿದ್ದಾನೆ ಅಂತ ಮುಂದೆ ಹೋಗ್ತಾ ಹೋಗ್ತಾ ಗೊತ್ತಾಗುತ್ತದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here