HomeEntertainmentನರೇಂದ್ರ ಮೋದಿ, ಅಮಿತ್ ಶಾ, ಅರವಿಂದ ಕೇಜ್ರಿವಾಲ್ ಬಗ್ಗೆ ಜೋಕ್: ಕುನಾಲ್ ಕಾಮ್ರಾಗೆ ನಿಷೇಧ ಹೇರಿದ...

ನರೇಂದ್ರ ಮೋದಿ, ಅಮಿತ್ ಶಾ, ಅರವಿಂದ ಕೇಜ್ರಿವಾಲ್ ಬಗ್ಗೆ ಜೋಕ್: ಕುನಾಲ್ ಕಾಮ್ರಾಗೆ ನಿಷೇಧ ಹೇರಿದ ಬುಕ್‌ ಮೈ ಶೋ

For Dai;y Updates Join Our whatsapp Group

Spread the love

ಇತ್ತೀಚೆಗೆ ಕಮಿಡಿಯನ್​ ಗಳು ನಗಿಸುವ ಬದಲು ಸಾಕಷ್ಟು ಭಾರಿ ವಿವಾದಗಳ ಮೂಲಕವೇ ಸುದ್ದಿಯಾಗುತ್ತಿದ್ದಾರೆ. ಇದೀಗ ಕಮಿಡಿಯನ್ ಕುನಾಲ್ ಕಾಮ್ರಾ ನಿರೂಪಣೆಯ ಕಾಮಿಡಿ ಶೋ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಇದರ ನಡುವೆ ಬುಕ್ ಮೈ ಶೋ, ಕುನಾಲ್ ಮೇಲೆ ನಿಷೇಧ ಹೇರಿದ್ದು, ಅವರ ಯಾವುದೇ ಶೋನ ಟಿಕೆಟ್​ಗಳನ್ನು ಮಾರಾಟ ಮಾಡುವುದಿಲ್ಲ ಎಂದಿದೆ. ಜೊತೆಗೆ ಅವರಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ತನ್ನ ವೆಬ್​ಸೈಟ್​ನಿಂದ ಅಳಿಸಿ ಹಾಕಿದೆ.

ಇತ್ತೀಚೆಗೆ ಕಾಮಿಡಿ ಶೋ ನಡೆಸಿದ್ದ ವಿಡಿಯೋವೊಂದನ್ನು ಕುನಾಲ್ ಕಾಮ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಪೊಟಿಕಲ್ ಕಾಮಿಡಿಯನ್ ಆಗಿರುವ ಕುನಾಲ್ ಕಾಮ್ರಾ ಆ ಶೋನಲ್ಲಿ ಏಕನಾಥ್ ಶಿಂಧೆ, ನರೇಂದ್ರ ಮೋದಿ, ಅಮಿತ್ ಶಾ, ಅರವಿಂದ ಕೇಜ್ರಿವಾಲ್ ಅವರ ಬಗ್ಗೆ ಹಾಸ್ಯ ಮಾಡಿದ್ದರು. ಕುನಾಲ್ ಕಾಮ್ರಾರ ವಿಡಿಯೋ ಸಖತ್ ವೈರಲ್ ಆಗಿದ್ದು, ಎರಡೇ ದಿನದಲ್ಲಿ ಎರಡು ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿತ್ತು. ಜೊತೆಗೆ ವಿಡಿಯೋ ನೋಡಿದ ಜನ ಧಾರಾಳವಾಗಿ ಹಣವನ್ನು ಸಹ ಕುನಾಲ್​ಗೆ ನೀಡಿದ್ದರು. ಆದರೆ ವಿಡಿಯೋ ನೋಡಿದ ಶೀವಸೇನಾ (ಶಿಂಧೆ ಬಣ) ರೊಚ್ಚಿಗೆದ್ದಿದ್ದು, ಶೋ ನಡೆದ ಮುಂಬೈನ ‘ಹಾಬಿಟ್’ ಆಡಿಟೋರಿಯಂಗೆ ನುಗ್ಗಿ ದಾಂಧಲೆ ಎಬ್ಬಿಸಿ, ಗಲಾಟೆ ಮಾಡಿದ್ದರು.

ಬಳಿಕ ಶಿವಸೇನೆಯು ಪೊಲೀಸರಿಗೆ ದೂರು ದಾಖಲಿಸಿದ್ದು, ದೂರು ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು ಕುನಾಲ್​ ಕಾಮ್ರಾಗೆ ಮೂರು ಬಾರಿ ಸಮನ್ಸ್ ಸಹ ನೀಡಿದ್ದಾರೆ. ಆದರೆ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿರುವ ಕುನಾಲ್ ಕಾಮ್ರಾ ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ. ಈ ನಡುವೆ ಶಿವಸೇನಾ (ಶಿಂಧೆ ಬಣ)ದ ಯೂಥ್​ ವಿಂಗ್​ನ ಮುಖಂಡ ರಾಹುಲ್ ಕನಾಲ್, ಬುಕ್​ ಮೈ ಶೋಗೆ ಪತ್ರ ಬರೆದು, ಕುನಾಲ್ ಕಾಮ್ರಾರ ಮುಂದಿನ ಶೋಗಳ ಟಿಕೆಟ್ ಅನ್ನು ಮಾರಾಟ ಮಾಡದಂತೆ ಮನವಿ ಮಾಡಿದ್ದರು.

ಶಿವಸೇನಾದ ಪತ್ರಕ್ಕೆ ಸ್ಪಂದಿಸಿರುವ ಬುಕ್ ಮೈ ಶೋ, ಕುನಾಲ್ ಕಾಮ್ರಾ ಬಗ್ಗೆ ತನ್ನ ವೆಬ್ ಸೈಟ್​ನಲ್ಲಿ ದಾಖಲಾಗಿದ್ದ ಎಲ್ಲ ಮಾಹಿತಿಯನ್ನು ಅಳಿಸಿ ಹಾಕಿದೆ. ಅದರ ಜೊತೆಗೆ ಕುನಾಲ್ ಅವರ ಮುಂದಿನ ಯಾವುದೇ ಶೋನ ಟಿಕೆಟ್ ಅನ್ನು ತನ್ನ ವೆಬ್ ಸೈಟ್ ಮೂಲಕ ಮಾರಾಟ ಮಾಡುವುದಿಲ್ಲ ಎಂದಿದೆ.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!