ಶಿವಮೊಗ್ಗ: ಸೈಬರ್ ಖದೀಮ ಹಾವಳಿ ರಾಜ್ಯದಲ್ಲಿ ಹೆಚ್ಚಾಗಲು ಶುರುವಾಗಿದೆ. ಹೌದು ಕುವೆಂಪು ವಿಶ್ವವಿದ್ಯಾಲಯದ ಅಧಿಕೃತ ವೆಬ್ ಸೈಟ್ ಹ್ಯಾಕ್ ಆಗಿರುವ ಬಗ್ಗೆ ವರದಿಯಾಗಿದೆ. ಬುಧವಾರ ರಾತ್ರಿ ವೇಳೆಗೆ ವಿವಿ ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಫೆಲಸ್ತೀನ್ ಪರ ಗುಂಪು ಈ ಕೃತ್ಯ ಮೆರೆದಿದೆ ಎನ್ನಲಾಗುತ್ತಿದೆ. ಕಲೀಮಲ್ಯಾಂಗ್ ಬ್ಲಾಕ್ ಹ್ಯಾಟ್ ಟೀಂ ವೆಬ್ ಸೈಟ್ ಹ್ಯಾಕ್ ಮಾಡಿದ್ದು,
Advertisement
ಸೇವ್ ಫೆಲಸ್ತೀನ್- ಇಸ್ರೇಲ್ ಡಾಗ್ ಎಂದು ವೆಬ್ ಸೈಟ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ಹ್ಯಾಕ್ ವಿಚಾರ ತಿಳಿದ ಬಳಿಕ ಕುವೆಂಪು ವಿಶ್ವ ವಿದ್ಯಾಲಯದ ತಾಂತ್ರಿಕ ತಂಡ ವೆಬ್ ಸೈಟ್ ಸ್ಥಗಿತಗೊಳಿಸಿದೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲು ವಿವಿ ಮುಂದಾಗಿದೆ.