ತಿರುವನಂತಪುರಂ: ಕೇಂದ್ರ ಸಚಿವ ಹಾಗೂ ನಟ ಸುರೇಶ್ ಗೋಪಿ ಅವರು ತಮ್ಮ ಆರ್ಥಿಕ ಪರಿಸ್ಥಿತಿಯಿಂದ ಅಸಮಾಧಾನ ವ್ಯಕ್ತಪಡಿಸಿ, ರಾಜಕೀಯದಿಂದ ಹಿಂದೆ ಸರಿದು ಮತ್ತೆ ಚಲನಚಿತ್ರ ರಂಗಕ್ಕೆ ಮರಳುವ ಸಾಧ್ಯತೆ ಕುರಿತು ಮಾತನಾಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಸಚಿವನಾದ ನಂತರ ನನ್ನ ಆದಾಯ ಸಂಪೂರ್ಣವಾಗಿ ನಿಂತುಹೋಗಿದೆ. ನನಗೆ ಈಗ ಹೆಚ್ಚಿನ ಹಣ ಬೇಕಾಗಿದೆ. ಹೀಗಾಗಿ, ನಾನು ಮತ್ತೆ ನಟನೆಯಲ್ಲಿ ಮುಂದುವರೆಯಲು ಬಯಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ಪ್ರಸ್ತುತ ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಇಲಾಖೆಯ ರಾಜ್ಯ ಸಚಿವರಾಗಿ ಸೇವೆ ನೀಡುತ್ತಿರುವ ಅವರು, “ನಾನು ಸಚಿವರಾಗಬೇಕೆಂದು ಬಯಸಿಲ್ಲ. ಆದರೆ ಈಗಿನ ಸ್ಥಿತಿಯಲ್ಲಿ ನಾನು ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇನೆ. ಹೀಗಾಗಿ ರಾಜಕೀಯದಿಂದ ದೂರ ಸರಿಯುವ ಯೋಚನೆ ಇದೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಅದೇ ವೇಳೆ, ತಮ್ಮ ಸ್ಥಾನಕ್ಕೆ ರಾಜ್ಯಸಭಾ ಸದಸ್ಯ ಸಿ. ಸದಾನಂದನ್ ಮಾಸ್ಟರ್ ಅವರನ್ನು ಪರ್ಯಾಯವಾಗಿ ಶಿಫಾರಸು ಮಾಡುವುದಾಗಿ ಹೇಳಿದ್ದಾರೆ. “ಇದು ಕೇರಳದ ರಾಜಕೀಯದಲ್ಲಿ ಹೊಸ ಅಧ್ಯಾಯವನ್ನೇ ಆರಂಭಿಸಬಹುದು,” ಎಂಬ ನಂಬಿಕೆ ಕೂಡ ಅವರು ವ್ಯಕ್ತಪಡಿಸಿದ್ದಾರೆ.