ಫೈನಾನ್ಸ್ ಗೆ ಕಟ್ಟಬೇಕಾಗಿದ್ದ ಲಕ್ಷ-ಲಕ್ಷ ಹಣ ಆನ್ಲೈನ್ ಗೇಮ್ ಗೆ ಬಳಕೆ: ವಾಪಸ್ ದುಡ್ಡು ಕಟ್ಟಲಾಗದೇ ಯುವಕ ಸೂಸೈಡ್

0
Spread the love

ಧಾರವಾಡ:- ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ಫೈನಾನ್ಸ್‌ಗೆ ಕಟ್ಟಬೇಕಿದ್ದ 3 ಲಕ್ಷ ರೂ.ಗೂ ಅಧಿಕ ಹಣವನ್ನು ಆನ್‌ಲೈನ್ ಗೇಮ್‌ಗೆ ಬಳಕೆ ಮಾಡಿ, ಬಳಿಕ ದುಡ್ಡು ವಾಪಸ್ ಕಟ್ಟಲಾಗದೇ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

Advertisement

ಬಸವರಾಜ ಸಕ್ರಪ್ಪನ್ನವರ (28) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಧಾರವಾಡ ತಾಲೂಕಿನ ಮಂಗಳಗಟ್ಟಿ ಮೂಲದವ ಎನ್ನಲಾಗಿದೆ. ಊರಿನಲ್ಲಿಯೇ ಫೈನಾನ್ಸ್ ಹಣವನ್ನ ಕಲೆಕ್ಷನ್ ಮಾಡುವ ಕೆಲಸ ಮಾಡುತ್ತಿದ್ದ.

ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದು ಸಂಗ್ರಹಿಸಿದ್ದ ಫೈನಾನ್ಸ್ ಹಣವನ್ನು ಆಟಕ್ಕೆ ಬಳಸಿಕೊಂಡಿದ್ದ. ಹೀಗೆ ಬಳಸಿಕೊಂಡು 3 ಲಕ್ಷ ರೂ.ಗೂ ಅಧಿಕ ಹಣವನ್ನು ಕಳೆದುಕೊಂಡಿದ್ದ. ಫೈನಾನ್ಸ್ ಹಣವನ್ನು ವಾಪಸ್ ಕಟ್ಟಲಾಗದೇ ಮನನೊಂದು ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಗರಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here