ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಉತ್ತಮ ಟಿಆರ್ ಪಿ ನಡುವೆಯ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಉತ್ತಮ ಕಥೆ ಹೊಂದಿದ್ದ ಲಕ್ಷ್ಮೀ ಬಾರಮ್ಮ ಧಾರವಾಹಿಯನ್ನು ಕೊನೆಯಾಗಿಸುತ್ತಿರುವುದು ಸಹಜವಾಗಿಯೇ ವೀಕ್ಷಕರಿಗೆ ಬೇಸರ ತರಿಸಿದೆ. ‘ಲಕ್ಷ್ಮೀ ಬಾರಮ್ಮ’ ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರ ಕಾಣುತ್ತಿದ್ದು ಇದೀಗ ಧಾರವಾಹಿ ತಂಡ ಕೊನೆಯ ಹಂತದ ಚಿತ್ರೀಕರಣ ಮುಗಿಸಿದೆ.
ಆರಂಭದಲ್ಲಿ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಒಂದು ಗಂಟೆ ಪ್ರಸಾರ ಕಾಣುತ್ತಿತ್ತು. ಆ ಬಳಿಕ ಅಕ್ಕ ಭಾಗ್ಯಾಳ ಕಥೆ ಬೇರೆ ಹಾಗೂ ತಂಗಿ ಲಕ್ಷ್ಮೀ ಕಥೆ ಬೇರೆಯಾಗಿ ಭಾಗ್ಯಲಕ್ಷ್ಮೀ ಹಾಗೂ ಲಕ್ಷ್ಮೀ ಬಾರಮ್ಮ ಧಾರವಾಹಿಯಾಗಿ ಸಾಗಿತ್ತು. ‘ಭಾಗ್ಯ ಲಕ್ಷ್ಮೀ’ ರಾತ್ರಿ 7 ಗಂಟೆಗೆ ಪ್ರಸಾರ ಕಾಣುತ್ತಿದ್ದರೆ, ‘ಲಕ್ಷ್ಮೀ ಬಾರಮ್ಮ’ 7.30ಕ್ಕೆ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಯ ಕೊನೆಯ ದಿನದ ಶೂಟ್ ಫೋಟೋ ವೈರಲ್ ಆಗಿದೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಬ್ರೋ ಗೌಡ ಅಲಿಯಾಸ್ ಶಮಂತ್ ಗೌಡ, ಭೂಮಿಕಾ ರಮೇಶ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಲರ್ಸ್ ವಾಹಿನಿಯ ಸೀರಿಯಲ್ಗಳ ಪೈಕಿ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಟಾಪ್ನಲ್ಲಿದೆ. ಆದರೂ ಧಾರವಾಹಿ ಕೊನೆಯಾಗಿಸುತ್ತಿರುವುದು ಸಹಜವಾಗಿಯೇ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.