ಮಹಿಳೆಯರು ಸೌಂದರ್ಯದ ಗಣಿ ಎನ್ನಬಹುದು. ಅವರು ಧರಿಸುವ ಆಭರಣ ಅವರ ಅಂದವನ್ನ ದುಪ್ಪಟ್ಟು ಮಾಡುತ್ತದೆ. ಮುಖ್ಯವಾಗಿ ಆಭರಣ ಎಂದರೆ ಬೆಳ್ಳಿ, ಬಂಗಾರ ಹಾಗೂ ವಜ್ರ ಸಾಮಾನ್ಯವಾಗಿ ನೆನಪಾಗುತ್ತದೆ.
ಈ ಆಭರಣಗಳನ್ನ ಧರಿಸುವುದರಿಂದ ಅಂದ ಹೆಚ್ಚಾಗುವುದರ ಜೊತೆಗೆ ಜ್ಯೋತಿಷ್ಯದ ಪ್ರಕಾರ ಅನೇಕ ಲಾಭಗಳಿದೆ. ನಮ್ಮ ಜೀವನದಲ್ಲಿ ನಾವು ಧರಿಸುವ ಆಭರಣ ಬಹಳ ಪ್ರಮುಖವಾದ ಪಾತ್ರವಹಿಸುತ್ತದೆ ಎನ್ನಲಾಗುತ್ತದೆ. ಇನ್ನು ನಾವು ಬೆಳ್ಳಿಯ ಬಗ್ಗೆ ಮಾತನಾಡುವುದಾದರೆ, ಅದರಿಂದ ಅನೇಕ ಪ್ರಯೋಜನಗಳಿದೆ. ಅದರಲ್ಲೂ ಮಹಿಳೆಯರು ಬೆಳ್ಳಿ ಉಂಗುರವನ್ನ ಧರಿಸಿದರೆ ಅವರ ಜೀವನವೇ ಬದಲಾಗುತ್ತದೆ ಎನ್ನುವ ನಂಬಿಕೆ ಇದ್ದು, ಏನೆಲ್ಲಾ ಪ್ರಯೋಜನವಿದೆ ಎಂಬುದು ಇಲ್ಲಿದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಸ್ತ್ರೀಯರು ಎಡಗೈಯಲ್ಲಿ ಹಾಗೂ ಪುರುಷರು ಬಲಗೈಯಲ್ಲಿ ಬೆಳ್ಳಿ ಉಂಗುರ ಧಾರಣೆ ಮಾಡುವುದರಿಂದ ಸಾಕ್ಷಾತ್ ಲಕ್ಷ್ಮೀಯೇ ಕೈಹಿಡಿಯುತ್ತಾಳೆ. ಬೆಳ್ಳಿ ಉಂಗುರ ಧರಿಸುವುದರಿಂದ ವ್ಯಕ್ತಿಯ ಜಾತಕದಲ್ಲಿ ಸೂರ್ಯ ಮತ್ತು ಶನಿ ಗ್ರಹಗಳು ಬಲಗೊಳ್ಳುತ್ತವೆ. ಇದರಿಂದ ವ್ಯಕ್ತಿಯ ಭಾಗ್ಯವೇ ಬದಲಾಗುತ್ತದೆ.
ಜಾತಕದಲ್ಲಿ ರಾಹು ದೋಷ ಇದ್ದವರು ಬೆಳ್ಳಿ ಉಂಗುರ ಧಾರಣೆಯಿಂದ ಈ ದೋಷವನ್ನು ನಿವಾರಿಸಬಹುದು. ಬೆಳ್ಳಿ ಉಂಗುರವು ವ್ಯಕ್ತಿಯ ಮನಸ್ಸನ್ನು ಶಾಂತವಾಗಿರಲು ತುಂಬಾ ಪ್ರಯೋಜನಕಾರಿ ಆಗಿದೆ. ಬೆಳ್ಳಿ ಉಂಗುರ ಧಾರಣೆಯಿಂದ ವ್ಯಕ್ತಿಯ ಅದೃಷ್ಟ ಖುಲಾಯಿಸಿ, ತಾಯಿ ಮಹಾಲಕ್ಷ್ಮಿಯ ಅನುಗ್ರಹವಾಗುತ್ತದೆ. ಜೀವನದಲ್ಲಿ ಹಣಕ್ಕೆ ಕೊರತೆಯೇ ಇರುವುದಿಲ್ಲ.